ಸರ್ಕಾರಿ ಜಮೀನಿನಲ್ಲಿ ವಾಸವಾಗಿರುವ 6500 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Somashekhar--01

ಕೆಂಗೇರಿ ನ.18- ಕ್ಷೇತ್ರವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ವಾಸವಾಗಿರುವ 6500 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕ ಎಸ್. ಟಿ. ಸೋಮಶೇಖರ್ ತಿಳಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇರೋಹಳ್ಳಿ ವಾರ್ಡ್‍ನ ಬಿಳೇಕಲ್ ಹಾಗೂ ದನಿನಮಂದೆ ಗ್ರಾಮದಲ್ಲಿ ವಾಸವಾಗಿರುವ ಕುಟುಂಬ ಸದಸ್ಯರ ಕುಂದು ಕೊರತೆ ವಿಚಾರಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರಿಗೆ ಸೂಚನೆ ಪತ್ರ ನೀಡಿ ಮಾತನಾಡಿದ ಅವರು, ಬೆಂಗಳೂರಿನಿಂದ 18 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಾಸವಾಗಿದ್ದ ಕುಟುಂಬದವರಿಗೆ ಹಕ್ಕು ಪತ್ರ ವಿತರಿಸಲು ಕಾನೂನಿನಲ್ಲಿ ಅವಕಾಶವಿರಲಿಲ್ಲ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರ ನೇತೃತ್ವದ ಸರ್ಕಾರ ಬಡವರು, ಮಧ್ಯಮ ವರ್ಗದವರು ಹಾಗು ದಲಿತರ ಕುಟುಂಬದವರಿಗೆ ಅನುಕೂಲ ಕಲ್ಪಿಸಲು ಕಾನೂನಿಗೆ ತಿದ್ದುಪಡಿ ತಂದು 94 ಸಿ ಸಿ ಯೋಜನೆ ಅಡಿಯಲ್ಲಿ ಸರ್ಕಾರಿ ಜಮೀನಿನಲ್ಲಿ ವಾಸ ಮಾಡುತ್ತಿರುವ ಎಲ್ಲಾ ಕುಟುಂಬದವರಿಗೆ ಹಕ್ಕು ಪತ್ರ ವಿತರಿಸಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಹೇರೋಹಳ್ಳಿ ವಾರ್ಡ್‍ನ ಪಾಲಿಕೆ ಸದಸ್ಯ ರಾಜಣ್ಣ ಮಾತನಾಡಿ, ಶಾಸಕ ಎಸ್.ಟಿ ಸೋಮಶೇಖರ್, ಮುಖ್ಯ ಮಂತ್ರಿ ಹಾಗೂ ಕಂದಾಯ ಸಚಿವರಿಗೆ ಮನವಿ ಮಾಡಿ ಕಾನೂನು ತೊಡಕನ್ನು ನಿವಾರಿಸಿ ಹಕ್ಕು ಪತ್ರ ನೀಡಲು ಆದೇಶ ನೀಡಿ ಕಾರ್ಯ ಪ್ರವೃತ್ತರಾಗಿರುವದು ನಾಗರಿಕರಲ್ಲಿ ಸಂತಸ ಹೆಚ್ಚಿಸಿದೆ ಎಂದರು.

Facebook Comments

Sri Raghav

Admin