ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಮೇ 12- ಕಲ್ಯಾಣಿಗಳು, ಸರ್ಕಾರಿ ಗೋಮಾಳ, ಗುಂಡುತೋಪು, ಉದ್ಯಾನವನಗಳೂ ಸೇರಿದಂತೆ ಇನ್ನಿತರ ಕಡೆ ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಪಟ್ಟಣ ನಗರ ಪ್ರದೇಶಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನಗರಪುರಸಭೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿಗಳ ವಶಕ್ಕೆ ಮುಂದಾಗಿದ್ದಾರೆ.

ನಗರದ ಸರ್.ಎಂ.ವಿ.ಸ್ಟೇಡಿಯಂನ ಸುಬ್ರಹ್ಮಣ್ಯೇಶ್ವರ, ಶನೈಶ್ವರ, ಹಾಗೂ ಶಿರಡಿ ಬಾಬಾ ದೇವಸ್ಥಾನಗಳ ಅರ್ಚಕರ ಮನೆಗಳ ಕಟ್ಟಡಗಳನ್ನು ನಗರಸಭೆ ಪೌರಾಯುಕ್ತರ ನೇತೃತ್ವದಲ್ಲಿ ಧ್ವಂಸಗೊಳಿಸಲಾಗಿದೆ ಸರ್ಕಾರಿ ಜಾಗದಲ್ಲಿ ಕಳೆದ ಮೂರುದಶಕಗಳ ಹಿಂದೆ ದೇವಸ್ಥಾನ ನಿರ್ಮಿಸಿಕೊಂಡಿದ್ದಲ್ಲದೆ,

ಅದರ ಮುಂಭಾಗದಲ್ಲಿ ದೊಡ್ಡ ಉದ್ಯಾನವನ ಹಾಗೂ ಅರ್ಚಕರ ವಸತಿಗೃಹಗಳನ್ನು ನಗರಸಭೆ ಅನುಮತಿ ಇಲ್ಲದೆ ನಿರ್ಮಿಸಿಕೊಂಡಿದ್ದರು, ಇದನ್ನು ಕೆಡವಿ ಹಾಕಲಾಗಿದ್ದು ಮೂರೂ ದೇವಸ್ಥಾನಗಳೂ ಸಹಾ ಇದೀಗ ರೈಲ್ವೆ ಇಲಾಖೆ ಜಾಗದಲ್ಲಿದ್ದು ಆ ಜಾಗವೂ ಅತಂತ್ರ ಎಂಬಂತಾಗಿದೆ.

ಒತ್ತುವರಿಯಾಗಿದ್ದ ಐದು ಕೋಟಿ ಮೌಲ್ಯದ ಕಲ್ಯಾಣಿ ನಗರಸಭೆ ವಶಕ್ಕೆ:
ನಗರದ ಉದ್ಯಾನವನ, ರಾಜಕಾಲುವೆ, ಕಲ್ಯಾಣಿಗಳನ್ನು ಸಾಕಷ್ಟು ನುಂಗಣ್ಣರು ಆಕ್ರಮಿಸಿಕೊಂಡಿದ್ದರು. ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಸರ್ವೆ ಮಾಡಿ ನಗರದ ವಾಪಸಂದ್ರ, ಬಿಬಿರಸ್ತೆ ಸೇರಿದಂತೆ ಹಲವು ಕಡೆಗಳನ್ನು ಕಲ್ಯಾಣಿಗಳನ್ನು ಮುಚ್ಚಿ ಒತ್ತುವರಿ ಮಾಡಿದುದುರ ತೆರವಿಗೆ ಸಾಕಷ್ಟು ಶ್ರಮಿಸುತ್ತಿದ್ದು, ನಗರಸಭೆಗೆ ಸಾರ್ವಜನಿಕರಿಂದ ಪ್ರಶಂಸೆ ದೊರೆಯುತ್ತಿದೆ.

ಬಿಬಿರಸ್ತೆಯ ಬ್ರಾಹ್ಮಣ ಕರ್ಮಭೂಮಿ ಪಕ್ಕದಲ್ಲಿ 10 ಗುಂಟೆ ಜಾಗದಲ್ಲಿದ್ದ ಕಲ್ಯಾಣಿಯನ್ನು ಮುಚ್ಚಿ ಪ್ರಭಾವಿ ನಾಯಕರ ಪ್ರಭಾವ ಬಳಸಿ ಖಾತೆ ಮಾಡಿಸಿಕೊಂಡು ಮೆರೆಯುತ್ತಿದ್ದವರಿಗೆ ಬಿಸಿಮುಟ್ಟಿಸಿ ಪೌರಾಯುಕ್ತ ಉಮಾಕಾಂತ್ ಅವರು 5 ಕೋಟಿಗೂ ಅಧಿಕ ಬೆಲೆ ಬಾಳುವ 10 ಗುಂಟೆ ಮೌಲ್ಯದ ಕಲ್ಯಾಣಿಯನ್ನು ನಗರಸಭೆ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೈಕೋರ್ಟ್ ತಡೆಯಾe್ಞÉ ಇದ್ದರೂ ದ್ವಂಸ: ನಗರದ ಹೆಚ್,ಎಸ್,ಗಾರ್ಡನ್‍ನ ಸರ್.ಎಂ.ವಿ,ಜಿಲ್ಲಾ ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ ನಗರಸಭೆಯ ಜಾಗದಲ್ಲಿ ದೇವಸ್ಥಾನ ಹಾಗೂ ಅರ್ಚಕರ ವಸತಿಗೃಗಳನ್ನು ನಗರಸಭೈಯವರು ಹೈಕೋರ್ಟ್‍ನ ತಡೆಯಾಜ್ಞಾ ಇದ್ದರೂ ದ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿ ಚಿಕ್ಕಬಳ್ಳಾ¥ಪುರದ ಡಾ||ಬಿ.ಆರ್.ಅಂಬೇಡ್ಕರ್‍ವೃತ್ತದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ಮಾಡಿದರು.

ಇದು ಜಿಲ್ಲಾಧಿಕಾರಿಗಳ ಧಾರ್ಮಿಕ ವಿರೋಧಿನೀತಿ ಎಂದು ಕಿಡಿಕಾರಿದರು. ಕಳೆದ ಮೂರು ದಶಕಗಳ ಕಾಲಾವಧಿಯಿಂದಲೂ ಟ್ರಸ್ಟ್ ವತಿಯಿಂದ ದೇವಾಲಯದ ಪ್ರಾಂಗಣದಲ್ಲಿ ಉದ್ಯಾನವನ ವಸತಿಗೃಹ ಹಾಗೂ ಸುತ್ತಲೂ ವಿವಿಧ ದೇವರುಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ,

ಕಳೆದ ಜನವರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ನಿಡದೇ ಏಕಾಏಕಿ ಕಾರ್ಯಾಚರಣೆ ನಡೆಸಿ ಕ್ರೀಡಾಂಗಣದ ಬದಿಯಲ್ಲಿ ದೇವಾಲಯಕ್ಕೆಂದು ಹಾಕಲಾಗಿದ್ದ ತಡೆಬೇಲಿಯನ್ನು ತೆರವುಗೊಳಿಸಲು ಬಂದಿದ್ದರು ಕಳೆದ ಶುಕ್ರವಾರವೂ ಬಂದಿದ್ದ ಕೆಲ ಅಧಿಕಾರಿಗಳ ತಂಡ ಜಾಗ ಬಿಟ್ಟುಕೊಡುವಂತೆ ಹೇಳಿತ್ತು.

ನಾವು ಮೂರ್ನಾಲ್ಕು ದಿನಗಳ ಕಾಲ ಕಾಲಾವಕಾಶ ಕೋರಿ ಮುಚ್ಚಳಿಕೆ ಬರೆದುಕೊಟ್ಟಿದ್ದೆವು ಇದಾವುದನ್ನು ಲೆಕ್ಕಿಸದೆ ಏಕಾಏಕಿ ದೇವಸ್ಥಾನ ಅರ್ಚಕರ ಜಾಗದ ಕಟ್ಟಡಗಳನ್ನು ದ್ವಂಸಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಬೀದಿಗೆ ಬಿದ್ದಿರುವ ಅರ್ಚಕರ ಕುಟುಂಬಗಳಿಗೆ ಮಾನವೀಯತೆ ದೃಷ್ಠಿಯಿಂದ ಆಶ್ರಯ ನೀಡಬೇಕು ಎಂದು ಒತ್ತಾಯ ಮಾಡಿದರು. ಧಾರ್ಮಿಕ ಮುಖಂಡರಾದ ವರದರಾಜು ಪ್ರೇಮಲೀಲಾವೆಂಕಟೇಶ್, ಮಧುಚಂದ್ರ, ಬಾಲಕೃಷ್ಣ, ಸೇರಿದಂತೆ ಅನೇಕ ಮುಖಂಡರುಗಳು ಇದ್ದರು.

Facebook Comments