ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ…!

ಈ ಸುದ್ದಿಯನ್ನು ಶೇರ್ ಮಾಡಿ

Siddaramaih--01

ಬೆಂಗಳೂರು, ಜ.16- ರಾಜ್ಯದ ಸರ್ಕಾರಿ ನೌಕರರ ವಿರೋಧಿ ಎನ್ನುವ ಹಣೆಪಟ್ಟಿಯಿಂದ ಹೊರ ಬರಲು ಸಿಎಂ ಸಿದ್ದರಾಮಯ್ಯ ಸಿದ್ದವಾಗಿದ್ದು. ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ ನೀಡಿ ಸರ್ಕಾರಿ ನೌಕರರ ಮನಸ್ಸು ಗೆಲ್ಲುವುದಕ್ಕೆ ಸಿದ್ದವಾಗಿದ್ದಾರೆ ಎನ್ನಲಾಗಿದೆ. ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಿದ್ದು, ವೇತನ ಏರಿಕೆ, ಹಲವಾರು ಭತ್ಯೆಗಳನ್ನು ನೀಡಲು ನಿರ್ಧರಿಸಿದ್ದು, ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರ ಬೀಳಲಿದೆ.ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಬಜೆಟ್ ಮಂಡನೆ (ಫೆಬ್ರವರಿ 16)ಗೂ ಮುನ್ನವೇ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸುವ ಎಲ್ಲಾ ಸಾಧ್ಯತೆಗಳಿವೆ.

ಐಎಎಸ್ ನಿವೃತ್ತ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ಇದೇ ವರ್ಷದ ಜೂ.1ರಂದು ವೇತನ ಆಯೋಗ ರಚಿಸಿ ಆದೇಶ ಹೊರಡಿಸಿದ್ದ ಸರ್ಕಾರ, ನಾಲ್ಕು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಸರ್ಕಾರಿ ನೌಕರರ ವೇತನ ಹೆಚ್ಚಳ ಹಾಗೂ ನಿವೃತ್ತಿ ವಯಸ್ಸನ್ನು ಎರಡು ವರ್ಷಕ್ಕೆ ಹೆಚ್ಚಳ ಮಾಡಲಿದ್ದಾರೆ. ಹಾಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 62ಕ್ಕೆ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ. ಜತೆಗೆ ಕನಿಷ್ಟ ವೇತನ ಮೊತ್ತ, ವಾರದ ರಜಾದಿನ ಎಲ್ಲವೂ ಬದಲಾಗುವ ಸಾಧ್ಯತೆಯಿದೆ.

ಮತದಾರರನ್ನು ಸೆಳೆಯಲು ಸರ್ಕಾರದಿಂದ ಪ್ರಬಲ ಅಸ್ತ್ರ : 

ಡಿವಿ ಸದಾನಂದ ಗೌಡರ ಬಿಜೆಪಿ ಸರ್ಕಾರವಿದ್ದಾಗ ಶೇ.22ರಷ್ಟು ವೇತನ ಏರಿಕೆಯಾಗಿತ್ತು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ನಡುವಿನ ವೇತನ ಏರಿಕೆ ಅಂತರ ಶೇ .67ರಷ್ಟಿತ್ತು. ಈಗ ಸಿದ್ದರಾಮಯಯ್ಯ ಅವರು ಶೇ .35ರಷ್ಟು ವೇತನ ಏರಿಕೆ ಮಾಡಿದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೇತನ ಅಂತರ ಶೇ.32ರಷ್ಟಿರಲಿದೆ. 7ನೇ ವೇತನ ಆಯೋಗ ರಚನೆಯಾಗಿ, ಶಿಫಾರಸು ಜಾರಿಗೊಂಡರೂ ಕರ್ನಾಟಕದಲ್ಲಿ ಆತುರವಾಗಿ ವೇತನ ಆಯೋಗ ರಚಿಸಿರಲಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರು ಅನೇಕ ಬಾರಿ ಸಮರ್ಥನೆ ನೀಡಿದ್ದಾರೆ.
6 ನೇ ವೇತನ ಆಯೋಗದ ಸಂಭವನೀಯ ವರದಿ
6.4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ನೆರವು
6.4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ನೆರವಾಗಲು ಶೇ 30ರಷ್ಟು ಮಧ್ಯಂತರ ಪರಿಹಾರ ಘೋಷಿಸುವ ಸಾಧ್ಯತೆಯಿದೆ.
ಶೇ 30ರಿಂದ 35ರಷ್ಟು ವೇತನ ಹೆಚ್ಚಳ ಮಾಡಿದರೆ, ಸರ್ಕಾರದ ಬೊಕ್ಕಸಕ್ಕೆ ಸರಿ ಸುಮಾರು 10,000 ಕೋಟಿ ರೂ. ಹೊರೆ ಬೀಳಲಿದೆ.
ನೆರೆ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಕೇಂದ್ರ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ಸಿಗುತ್ತದೆ.
ಕನಿಷ್ಠ ವೇತನ ಮೊತ್ತ 16,350 ರೂ.ಗೆ, ಗರಿಷ್ಠ ವೇತನ 1,32,925 ರೂ.ಗೆ ಏರಿಕೆ.
ಕೇಂದ್ರ -ರಾಜ್ಯ ಸರ್ಕಾರಿ ನೌಕರರಿಗೆ ಸಮಾನ ವೇತನ
ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡಬೇಕು
ಏಪ್ರಿಲ್ 1, 2017ರಿಂದ ಅನ್ವಯಿಸುವಂತೆ ಶೇ 30ರಷ್ಟು ಹಣ ಬಿಡುಗಡೆ ಮಾಡಬೇಕು.
ಈಗ ಶೇ 30-35ರಷ್ಟು ವೇತನ ಹೆಚ್ಚಿಸಿ ಮಧ್ಯಂತರ ಪರಿಹಾರ ನೀಡಲಿ ಎಂದು 6.4 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಅವರು ಕೇಳಿಕೊಂಡಿದ್ದಾರೆ.
ಗ್ರೂಪ್ ಎ : 48, 625 ರೂ., ಗ್ರೂಪ್ ಬಿ: 39,425 ರೂ., ಗ್ರೂಪ್ ಸಿ : 19, 850 ರೂ., ಗ್ರೂಪ್ ಡಿ: 16, 350 ರೂ.

Facebook Comments

Sri Raghav

Admin