ಸರ್ಕಾರಿ ನೌಕರರ ವರ್ಗಾವಣೆ, ಆಯಕಟ್ಟಿನ ಜಾಗಕ್ಕೆಕ್ಕಾಗಿ ತೆರೆಮರೆಯ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

Transfer--01

ಬೆಂಗಳೂರು, ಜು.11- ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ತೀವ್ರಗೊಂಡಿದ್ದು, ಲಾಬಿ ಜೋರಾಗಿದೆ.   ಆಯಕಟ್ಟಿನ ಜಾಗಗಳಿಗೆ ವರ್ಗಾವಣೆಯಾಗಲು ನೌಕರರು ಒಂದೆಡೆ ತೆರೆಮರೆಯ ಕಸರತ್ತು ನಡೆಸಿದರೆ ಚುನಾವಣಾ ವರ್ಷವಾಗಿದ್ದರಿಂದ  ತಮಗೆ ಬೇಕಾದವರನ್ನು ತಮ್ಮ ಕ್ಷೇತ್ರಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಜನಪ್ರತಿನಿಧಿಗಳು ಕೊನೇ ಕ್ಷಣದ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಇದೇ ಜು.15 ಕಡೆಯ ದಿನಾಂಕವಾಗಿರುವುದರಿಂದ ವರ್ಗಾವಣೆಗಾಗಿ ಶಾಸಕರ, ಸಚಿವರ, ವಿಧಾನಪರಿಷತ್ ಸದಸ್ಯರ, ಸಂಸದರ ಶಿಫಾರಸು ಪತ್ರ ಹಿಡಿದವರ ಅಲೆದಾಟ ಹೆಚ್ಚಾಗಿದೆ. ವಿಕಾಸಸೌಧ, ವಿಧಾನಸೌಧ, ಶಾಸಕರ ಭವನ, ಸಚಿವರ ನಿವಾಸಗಳಲ್ಲಿ ಎಲ್ಲಿ ನೋಡಿದರೂ ವರ್ಗಾವಣೆಗಾಗಿ ಶಿಫಾರಸು ಪತ್ರ ಹಿಡಿದವರೇ ಕಂಡುಬರುತ್ತಿದ್ದಾರೆ.

ತರಾತುರಿಯಲ್ಲಿ ಹಂತಹಂತಗಳಲ್ಲಿ ವರ್ಗಾವಣೆ ಪಟ್ಟಿ ಸಿದ್ಧಗೊಳ್ಳುತ್ತಿದ್ದು, ಆಯಾ ಇಲಾಖೆಗಳಿಗೆ ವರ್ಗಾವಣೆಯಾದವರ ಪಟ್ಟಿ ರವಾನೆಯಾಗುತ್ತಿದೆ. ಸಚಿವರು, ಶಾಸಕರು ತಮಗೆ ಬೇಕಾದವರನ್ನು ಆಯಾಕಟ್ಟಿನ ಜಾಗಗಳಿಗೆ ವರ್ಗಾವಣೆ ಮಾಡಿ ಸಂಬಂಧಿಸಿದ ಪಟ್ಟಿಯನ್ನು ಆಯಾ ಇಲಾಖೆಗಳಿಗೆ ರವಾನಿಸುತ್ತಿದ್ದಾರೆ.  ವಿಶೇಷವಾಗಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ, ಪೊಲೀಸ್, ಲೋಕೋಪಯೋಗಿ ಸಮಾಜಕಲ್ಯಾಣ, ಸಾರಿಗೆ, ಗೃಹ, ಕೃಷಿ, ಕಾರ್ಮಿಕ, ಅರಣ್ಯ, ತೋಟಗಾರಿಕೆ, ಅಬಕಾರಿ, ಕೈಗಾರಿಕೆ ಸೇರಿದಂತೆ ಎಲ್ಲಾ ಇಲಾಖೆಗಳ ನೌಕರರು ್ಲ ವರ್ಗಾವಣೆಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಭಾರೀ ಲಾಬಿ ಕೂಡ ನಡೆಯುತ್ತಿದೆ.

ಜನಪ್ರತಿನಿಧಿಗಳು ಬಹುತೇಕ ಎಲ್ಲರಿಗೂ ಶಿಫಾರಸು ಪತ್ರಗಳನ್ನು ನೀಡಿದ್ದಾರೆ. ತಮ್ಮ ವರ್ಗಾವಣೆ ಏನಾಯಿತು ಎಂದು ಸಂಬಂಧಿಸಿದ ಇಲಾಖೆ ವಿಧಾನಸೌಧದ ಮುಖ್ಯ ಕಚೇರಿ, ಶಾಸಕರ ಆಪ್ತ ಸಹಾಯಕರ ಬಳಿ ನೌಕರರು ಹುಡುಕತೊಡಗಿದ್ದಾರೆ.  ಸಾಮಾನ್ಯ ವರ್ಗಾವಣೆಗೆ ಜೂ.30 ಕೊನೆಯ ದಿನಾಂಕವಾಗಿತ್ತು. ಅಧಿವೇಶನದ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗಾವಣೆ ದಿನಾಂಕವನ್ನು ಜು.15ರವರೆಗೆ ಮುಂದೂಡಲಾಗಿತ್ತು. ಇನ್ನು ನಾಲ್ಕೇ ದಿನ ಬಾಕಿ ಇರುವುದರಿಂದ ವರ್ಗಾವಣೆಗಾಗಿ ನೌಕರರು ಲಾಬಿ ಹೆಚ್ಚಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin