ಸರ್ಕಾರಿ ಮಾದರಿ ಶಾಲೆಗೆ ನೀರು ಶುದ್ಧೀಕರಣ ಘಟಕ

ಈ ಸುದ್ದಿಯನ್ನು ಶೇರ್ ಮಾಡಿ

CHIKKAMANGALURU

ಚಿಕ್ಕಮಗಳೂರು, ಆ.18- ನಗರದ ಬಸವನಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಗೆ ಇನ್ನರ್‍ವೀಲ್ ಕ್ಲಬ್‍ನಿಂದ ಶುದ್ಧೀಕರಿಸುವ ನೀರಿನ ಘಟಕವನ್ನು ನೀಡಲಾಯಿತು.ಅಧ್ಯಕ್ಷೆ ಶ್ರೀಲಕ್ಷ್ಮೀ ನಟರಾಜ್ ಮಾತನಾಡಿ, ಮಕ್ಕಳಿಗೆ ಹೆಚ್ಚಾಗಿ ಅಶುದ್ಧ ನೀರಿನಿಂದ ರೋಗಗಳು ಹರಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಆರೋಗ್ಯದ ಕುರಿತ ಕಾಳಜಿಯಿಂದ ಈ ಘಟಕ ನೀಡಲಾಗಿದ್ದು ನೀರನ್ನು ಮಿತವಾಗಿ ಬಳಸಬೇಕು.

 

ಶಾಲೆ ದತ್ತು ಪಡೆದ ನಂತರ ಇಂಗ್ಲೀಷ್ಗ್ರಂ ಥಾಲಯ, ಶೌಚಾಲಯ ನವೀಕರಿಸಿಕೊಡಲಾಗಿದೆ ಎಂದರು.ಮುಖ್ಯ ಶಿಕ್ಷಕ ಪ್ರಭಾಕರ್ ಮಾತನಾಡಿ, ಇಂತಹ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಇನ್ನರ್‍ವ್ಹೀಲ್‍ನಂತಹ ಸಂಸ್ಥೆಗಳು ಮುಂದೆ ಬಂದಲ್ಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿಗೊಳ್ಳುತ್ತವೆ ಎಂದರು.ಇನ್ನರ್‍ವ್ಹೀಲ್ ಕ್ಲಬ್ ಕಾರ್ಯದರ್ಶಿ ರೂಪ ರವಿ, ಪ್ರಮುಖರಾದ ವೀಣಾ ದಿನೇಶ್, ರಜನಿ, ಹರ್ಷವರ್ಧನ್ ಮತ್ತು ಸದಸ್ಯರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin