ಸರ್ಕಾರಿ ವಾಟ್ಸಾಪ್ ಗ್ರೂಪ್‍ನಲ್ಲಿ ಸೆಕ್ಸ್ ವಿಡಿಯೋ ಹಾಕಿ ಸಸ್ಪೆಂಡ್ ಆದ ಅಧಿಕಾರಿ

ಈ ಸುದ್ದಿಯನ್ನು ಶೇರ್ ಮಾಡಿ

Whastsapp-group

ಪುದುಚೇರಿ, ಜ.1-ಇಲ್ಲಿನ ಸರ್ಕಾರಿ ಅಧಿಕಾರಿಗಳ ವಾಟ್ಸಾಪ್ ಗ್ರೂಪ್‍ಗೆ ಅಶ್ಲೀಲ ವಿಡಿಯೋ ದೃಶ್ಯ ಪೋಸ್ಟ್ ಮಾಡಿದ ನಾಗರಿಕ ಸೇವೆಯ (ಪಿಸಿಎಸ್) ಹಿರಿಯ ಅಧಿಕಾರಿಯೊಬ್ಬನನ್ನು ಸಸ್ಪೆಂಡ್ ಮಾಡಲಾಗಿದೆ.   ಸರ್ಕಾರದ ಕೆಲಸಗಳ ಬಗ್ಗೆ ಚರ್ಚಿಸಲು ಇರುವ ವಾಟ್ಸಾಪ್ ಗ್ರೂಪ್‍ನಲ್ಲಿ ಅಶ್ಲೀಲ ಚಿತ್ರವನ್ನು ಪೋಸ್ಟ್ ಮಾಡಿದ ಸಹಕಾರಿ ಸಮಾಜಗಳ ರಿಜಿಸ್ಟ್ರಾರ್ ಎ.ಎಸ್. ಶಿವಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಲೆಫ್ಟಿನೆಂಟ್ ಗರ್ವನರ್ ಕಿರಣ್ ಬೇಡಿ ಅದೇಶ ಹೊರಡಿಸಿದ್ದಾರೆ.  ಕೇಂದ್ರ ನಾಗರಿಕ ಸೇವೆಗಳ ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ 1965ರ ನಿಯಮ ಅನ್ವಯ ಕಿರಣ್ ಬೇಡಿ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ. ಅನುಮತಿ ಇಲ್ಲದೆ ಕಚೇರಿಯನ್ನು ತೊರೆಯದಂತೆ ಷರತ್ತು ವಿಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಗ್ರೂಪ್‍ನಲ್ಲಿ ಮಹಿಳಾ ಉದ್ಯೋಗಿಗಳೂ ಇದ್ದು, ವಿಡಿಯೋ ಡೌನ್‍ಲೋಡ್ ಮಾಡಿ ನೋಡಿದವರು ತೀವ್ರ ಮುಜಗರಕ್ಕೀಡಾಗಿ ಅಸಹ್ಯ ಪಡಬೇಕಾಗಿ ಬಂತು ಎಂದು ಸಹದ್ಯೋಗಿಯೊಬ್ಬರು ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin