ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ 8 ಕೋಟಿ ರೂ. ಅನುದಾನ ಬಿಡುಗಡೆ 

ಈ ಸುದ್ದಿಯನ್ನು ಶೇರ್ ಮಾಡಿ

beluru

ಬೇಲೂರು, ಫೆ.25- ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ 8 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ತಾಲೂಕಿನ ಹಲವಾರು ಕೆರೆಗಳನ್ನು ಹೂಳು ತೆಗೆಸುವ ಮೂಲಕ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಶಾಸಕ ವೈ.ಎನ್.ರುದ್ರೇಶಗೌಡ ಹೇಳಿದರು.ಪಟ್ಟಣದ ವಿಷ್ಣು ಸಮುದ್ರ ಕೆರೆ ಹೂಳು ತೆಗೆಯುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ಧ ವಿಷ್ಣು ಸಮುದ್ರ ಕೆರೆಯನ್ನು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಈಗಾಗಲೆ ಕಲ್ಯಾಣಿ ಕಾಮಗಾರಿಯನ್ನು 1.30 ಕೋಟಿಯಲ್ಲಿ ಅಭಿವೃದ್ಧಿ ಹಾಗೂ 50 ಲಕ್ಷ ರೂ.ಗಳಲ್ಲಿ ಕಾಲುವೆ ನಿರ್ಮಾಣ ಮಾಡಲಾಗಿದ್ದು, ಕಲ್ಯಾಣಿಯ ಸುತ್ತ ಕಬ್ಬಿಣದ ರೈಲಿಂಗ್ ಅಳವಡಿಸಿದ್ದು, ಮುಂದಿನ ಚನ್ನಕೇಶವ ದೇವಾಲಯದ ಜಾತ್ರೆಯೊಳಗೆ ಕಲ್ಯಾಣಿ ಕಾಮಾಗಾರಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆಯಿಂದ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಲ್ಲಿ 1 ಕೋಟಿ ಮಂಜೂರಾಗಿದ್ದು, ಇದರಲ್ಲಿ ಕೊಳವೆ ಬಾವಿ ನಿರ್ಮಿಸಲಾಗುವುದು. 5 ಕೋಟಿ 26 ಲಕ್ಷ ರೂ.ಗಳಲ್ಲಿ ಬಿಕ್ಕೋಡು ಕೆರೆಗೆ 75 ಲಕ್ಷ, ದೊಡ್ಡಸಲಾವರ ಕೆರೆಗೆ 25 ಲಕ್ಷ, ಸಿಂಗಪುರ ಕೆರೆಗೆ 25 ಲಕ್ಷ, ಜಾವಗಲ್ 2 ಕೆರೆಗೆ 79 ಲಕ್ಷ, ಹಿರೆಕಟ್ಟೆ ಕೆರೆಗೆ 50 ಲಕ್ಷ, ದೋಡ್ಡಕೋಡಿಹಳ್ಳಿ ಕೆರೆಗೆ 1 ಕೋಟಿ, ಬಿದರೆಕೆರೆ ಕೆರೆಗೆ 25 ಲಕ್ಷ, ರಣಘಟ್ಟ ಕೆರೆಗೆ 40 ಲಕ್ಷ, ದೊಡ್ಡಬ್ಯಾಡಿಗೆರೆ ಕೆರೆಗೆ 10 ಲಕ್ಷ, ಸೋಮನಹಳ್ಳಿ ಕೆರೆಗೆ 21 ಲಕ್ಷ ಮೀಸಲಿಟ್ಟು ಈಗಾಗಲೆ ಕಾಮಾಗಾರಿ ಆರಂಭಿಸಲಾಗಿದೆ ಎಂದರು.ಇಲ್ಲಿನ ವಿಷ್ಣು ಸಮುದ್ರ ಕೆರೆ ಕಾಮಗಾರಿಯನ್ನು ಗುತ್ತಿಗೆದಾರರು ಉತ್ತಮವಾಗಿ ನಿರ್ವಹಿಸಬೇಕು. ಅಲ್ಲದೆ, ಆದಷ್ಟು ಬೇಗ ಕಾಮಗಾರಿ ಮುಗಿಸುವುದಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.ತಾಪಂ ಅಧ್ಯಕ್ಷ ತಮ್ಮಣ್ಣಗೌಡ, ಜಿಪಂ ಸದಸ್ಯೆ ಲತಾ ಮಂಜೇಶ್ವರಿ, ಖಾದಿ ಗ್ರಾಮೋದ್ಯೋಗ ಮಂಡಳಿ ರಾಜ್ಯ ಸಮಿತಿ ನಿರ್ದೇಶಕ ಹಾಗೂ ಜಿಲ್ಲಾಧ್ಯಕ್ಷ ವೈ.ಎನ್.ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷ ಶಿವೇಗೌಡ, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮುನಿರ್ ಅಹಮ್ಮದ್‍ಪಾಷಾ, ಜೆ.ಇ.ಶ್ರೀನಿವಾಸ್, ಮುಖಂಡರಾದ ಕೇಶವಮೂರ್ತಿ, ರಮೇಶ್ ಇನ್ನಿತರರಿದ್ದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin