ಸರ್ಜರಿಗಾಗಿ 500ಕೆಜಿ ಗಜಗಾತ್ರದ ಈ ಮಹಿಳೆಯನ್ನು ವಿಮಾನದಲ್ಲಿ ಮುಂಬೈಗೆ ಕರೆತರಲು 20 ಲಕ್ಷ ರೂ ವೆಚ್ಚ.!

ಈ ಸುದ್ದಿಯನ್ನು ಶೇರ್ ಮಾಡಿ

Girl-500-kg

ಮುಂಬೈ,ಡಿ.9- ಈಜಿಪ್ಟ್‍ನ 500 ಕೆಜಿ ತೂಕದ ಮಹಿಳೆಯನ್ನು ಮುಂಬೈಗೆ ಶಸ್ತ್ರಚಿಕಿತ್ಸೆಗಾಗಿ ವಿಶೇಷ ವಿಮಾನದಲ್ಲಿ ಕರೆತರಲು ಬೇಕಾಗುವ ವೆಚ್ಚ ಬರೋಬ್ಬರಿ 20 ಲಕ್ಷ ರೂ.ಗಳು!  ಈಜಿಪ್ಟ್‍ನ 36 ವರ್ಷದ ಎಮನ್ ಅಹಮದ್ ಎಂಬ ಭಾರೀ ತೂಕದ ಮಹಿಳೆಯ ಮೈ ಭಾರ ಇಳಿಸಲು ಶಸ್ತ್ರ ಚಿಕಿತ್ಸೆಗಾಗಿ ಈ ಹಿಂದೆ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಆಶ್ವಾಸನೆ ನೀಡಿದ್ದರು. ಈಜಿಪ್ಟ್ ರಾಜಧಾನಿ ಕೈರೋದಿಂದ ಆಕೆಯನ್ನು ಮುಂಬೈಗೆ ಚಿಕಿತ್ಸೆಗಾಗಿ ಕರೆತರಲು ಯಾವುದೇ ನೇರ ವಿಮಾನ ಇಲ್ಲ. ಮೇಲಾಗಿ ಎಮನ್‍ರನ್ನು ಕರೆತರಲು ಯಾವುದೇ ಖಾಸಗಿ ವಿಮಾನಗಳು ಮುಂದೆ ಬರುತ್ತಿಲ್ಲ.

ಆಕೆಗಾಗಿಯೇ ವಿಮಾನದಲ್ಲೇ ಮಾರ್ಪಾಡು ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ವಿಶ್ವದಲ್ಲಿನ ಬಹುತೇಕ ವಿಮಾನಗಳಲ್ಲಿ ಗರಿಷ್ಠ 136 ಕೆಜಿ ತೂಕದ ವ್ಯಕ್ತಿಯನ್ನು ಮಾತ್ರವೇ ಕರೆತರುವ ಅವಕಾಶವಿದೆ. ಈಗ ಈಕೆಯನ್ನು ಈಜಿಪ್ಟ್‍ನಿಂದ ತರಲು ವಿಮಾನವನ್ನು ವಿಶೇಷವಾಗಿ ಬದಲಿಸಬೇಕಿದೆ. ಆಕೆಯನ್ನು ಮುಂಬೈಗೆ ತರಲು 20 ಲಕ್ಷ ರೂ.ಗಳಿಗೂ ಹೆಚ್ಚು ಹಣ ಬೇಕಾಗುತ್ತದೆ. ಆಕೆ ಒಂದು ಮಗ್ಗಲಿನಿಂದ ಇನ್ನೊಂದು ಮಗ್ಗಲಿಗೆ ಹೊರಳಲು ಸಾಧ್ಯವಾಗದಂತಹ ಪರಿಸ್ಥಿತಿ ಇರುವಾಗ ಆಕೆಯನ್ನು ವಿಮಾನದಲ್ಲಿ ಕರೆತರುವುದಾದರೂ ಹೇಗೆ ಎಂಬ ತಲೆನೋವು ಈಜಿಪ್ಟ್ ಸರ್ಕಾರವನ್ನು ಕಾಡುತ್ತಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin