ಸರ್ಜಿಕಲ್ ಸ್ಟೈಕ್ ಬಗ್ಗೆ ಸಾಕ್ಷಿ ಕೇಳಿದ್ದ ಕೇಜ್ರಿವಾಲ್’ ಮೇಲೆ ಇಂಕ್ ಅಟ್ಯಾಕ್, ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

kejri6

ಬಿಕಾನೇರ್, ಅ.5- ಪಾಕಿಸ್ತಾನ ಮಾಧ್ಯಮಗಳಲ್ಲಿ ಹೀರೋ ಆಗಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮೇಲೆ ಕೆಲವರು ಮಸಿ ಎರಚಿದ್ದಾರೆ. ರಾಜಸ್ತಾನದ ಬಿಕಾನೇರ್ಗೆ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ಕೆಲ ವ್ಯಕ್ತಿಗಳು ಮಸಿ ಎರಚಿದ್ದಾರೆ. ಪೊಲೀಸರು ಇನ್ನೂ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ನನ್ನ ಮೇಲೆ ಮಸಿ ಎರಚಿದ್ದವರನ್ನು ಆ ದೇವರು ಚೆನ್ನಾಗಿಟ್ಟಿರಲಿ, ಅವರಿಗೆ ಒಳ್ಳೆದಾಗಲಿ ಎಂದು ಹೇಳಿದ್ದಾರೆ.  ಅರವಿಂದ್ ಕೇಜ್ರಿವಾಲ್, ಭಾರತೀಯ ಸೇನೆ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಸರ್ಜಿಕಲ್ ಸ್ಟೈಕ್ ನಡೆಸಿದ್ದಕ್ಕೆ ಪುರಾವೆ ಒದಗಿಸಬೇಕೆಂದು ಪ್ರಧಾನಿ ಅವರನ್ನು ಒತ್ತಾಯಿಸಿದ್ದರು. ಕೇಜ್ರಿವಾಲ್ ಅವರ ಈ ನಡೆಗೆ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಇದೆ ಕಾರಣಕ್ಕೆ ಕೇಜ್ರಿವಾಲ್’ ಮೇಲೆ ‘ಇಂಕ್ ಅಟ್ಯಾಕ್’ ಮಾಡಲಾಗಿದೆ.

ಮಂಗಳವಾರ ರಾತ್ರಿ ರಾಜಸ್ಥಾನದ ಬಿಕನೇರ್ ನಲ್ಲಿ ಎಬಿವಿಪಿ ಕಾರ್ಯಕರ್ತ ದಿನೇಶ್ ಓಜಾ ಎಂಬಾತನಿಂದ ಇಂಕ್ ದಾಳಿ ನಡೆದಿದ್ದು ಆತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಬಳಿಕ ಅರವಿಂದ ಕೇಜ್ರಿವಾಲ್ , ನನ್ನ ಮೇಲೆ ಇಂಕ್ ದಾಳಿ ನಡೆಸಿದವರನ್ನು ದೇವರು ಕಾಪಾಡಲಿ. ಅವರಿಗೆ ಒಳ್ಳೆಯದಾಗಲಿ ಅಂತ ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ ನೂರಕ್ಕೂ ಹೆಚ್ಚು ಭಯೋತ್ಪಾದಕರು ಎಲ್ಒಸಿ ದಾಟಿ ಭಾರತದಲ್ಲಿ ದಾಳಿ ನಡೆಸಲು ಸಜ್ಜಾದ್ದಾರೆ ಎಂದು ಗುಪ್ತಚರ ಸಂಸ್ಥೆ ವರದಿ ನೀಡಿದೆ. ಇದಕ್ಕೆ ಪೂರಕವೆಂಬಂತೆ ಗಡಿಯ ನೂರು ಮೀಟರ್ ದೂರದಲ್ಲಿ ಪಾಕಿಸ್ತಾನ ಸೇನೆಯದ್ದಲ್ಲದ ವಾಹನಗಳು ತಿರುಗಾಡುತ್ತಿವೆ ಎಂದು ಬಿಎಸ್ಎಫ್ನ ಡಿಜಿ ಕೆಕೆ ಶರ್ಮಾ ಮಾಹಿತಿ ನೀಡಿದ್ದಾರೆ. ಜೊತೆಗೆ ಲಾಂಚ್ ಪ್ಯಾಡ್’ ಗಳ ಬಗ್ಗೆಯೂ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಪಾಕ್ ಕಡೆಯಿಂದ ನಿರಂತರವಾಗಿ ಶೆಲ್ ದಾಳಿ ನಡೆಯುತ್ತಿದೆ ಅಂತಾನೂ ಹೇಳಿದ್ದಾರೆ.

ಈ ಹಿನ್ನೆಲೆ ಗಡಿಯುದ್ಧಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು ಬಿಎಸ್ಎಫ್ನ ಮಹಿಳಾ ಪಡೆಯೂ ಗಡಿ ಕಾಯುತ್ತಿದೆ. ಪಂಜಾನಲ್ಲಿ ಫಾಜಿಲ್ಕಾ ಗಡಿ ಪ್ರದೇಶದಲ್ಲಿ ಮಹಿಳಾ ಸೇನೆ ಗಡಿಯಲ್ಲಿ ಹಗಲು-ರಾತ್ರಿ ಶಸ್ತ್ರಾಸ್ತ್ರಗಳೊಂದಿಗೆ ಗಡಿಯತ್ತ ಹದ್ದಿನ ಕಣ್ಣಿಟ್ಟಿದ್ದು, ಸರ್ಕಾರ ಸೂಚನೆ ಕೊಟ್ರೆ ದಾಳಿಗೆ ಸಿದ್ಧ ಅಂತಾ ವಾಯುಸೇನಾ ಮುಖ್ಯಸ್ಥರು ಹೇಳಿಕೆ ಕೊಟ್ಟಿದ್ದಾರೆ. ಈ ನಡುವೆ ಭಾರತ- ಬಾಂಗ್ಲಾ ಗಡಿಯಲ್ಲಿ ನೂತನವಾಗಿ ಬೇಲಿ ನಿರ್ಮಾಣ ಮಾಡುವ ಮಹತ್ವದ ನಿರ್ಧಾರಕ್ಕೆ ಉಭಯ ದೇಶಗಳು ಸಮ್ಮತಿ ಸೂಚಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin