ಸರ್ಜಿಕಲ್ ಸ್ಟ್ರೈಕ್‍ ನಡೆಸಿದ್ದರಿಂದ ಶೇ.45ರಷ್ಟು ಉಗ್ರರ ನುಸುಳಿವಿಕೆ ಇಳಿಮುಖ

ಈ ಸುದ್ದಿಯನ್ನು ಶೇರ್ ಮಾಡಿ

Surgical-Strike--01

ನವದೆಹಲಿ,ಜೂ.3- ಭಯೋತ್ಪಾದಕರನ್ನು ಸದೆ ಬಡೆಯಲು ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಸೇನಾ ಕಮ್ಯಾಂಡೊಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಈಗ ಫಲ ನೀಡುತ್ತಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಗಡಿಪ್ರದೇಶದಲ್ಲಿ ಉಗ್ರಗಾಮಿಗಳ ನುಸುಳುವಿಕೆ ಶೇ.45ರಷ್ಟು ಇಳಿಮುಖವಾಗಿದೆ ಎಂದು ಹೇಳಿದ್ದಾರೆ.   ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆಯಿಂದ ನಲುಗಿದ್ದ ಜಮ್ಮುಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದರು.ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಜಂಟಿ ಭದ್ರತಾ ಪಡೆಗಳು ಕೈಗೊಂಡಿರುವ ಮಾವೋವಾದಿ ನಿಗ್ರಹ ಕಾರ್ಯಾಚರಣೆ ಯಶಸ್ವಿಯಾಗುತ್ತಿದ್ದು , ಬಂಡುಕೋರರ ಹಾವಳಿಯನ್ನು ಶೇ.25ರಷ್ಟು ಹತ್ತಿಕ್ಕಲಾಗಿದೆ ಎಂದು ರಾಜನಾಥ್ ಸಿಂಗ್ ವಿವರಿಸಿದರು.   ಭಾರತದಲ್ಲಿ ಇಸ್ಲಾಮಿಕ್(ಐಎಎಸ್) ಸ್ಟೇಟ್ ಭಯೋತ್ಪಾದಕರ ಚಟುವಟಿಕೆ ವಿಸ್ತರಣೆಯಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸಾರಿದ ಗೃಹಸಚಿವರು ಐಎಸ್ ಉಗ್ರರ ಪರ ಅನುಕಂಪ ಹೊಂದಿರುವರು ಮತ್ತು ಅವರಿಗೆ ಬೆಂಬಲ ನೀಡುತ್ತಿರುವವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin