ಸರ್ಜಿಕಲ್ ಸ್ಟ್ರೈಕ್ ನಡೆಸಲು ಸೇನೆಗೆ ಮಹತ್ವದ ಸುಳಿವು ನೀಡಿದ್ದ ಇಸ್ರೋ

ಈ ಸುದ್ದಿಯನ್ನು ಶೇರ್ ಮಾಡಿ

Isro

ನವದೆಹಲಿ, ಅ.3– ಇಸ್ರೋದಿಂದ ಇತ್ತೀಚೆಗೆ ಉಡಾವಣೆ ಮಾಡಲಾದ ಕಾರ್ಟೊಸ್ಯಾಟ್-2ಸಿ ಉಪಗ್ರಹವು ಗಡಿ ಸಮೀಪದಲ್ಲಿ ದಾಳಿಗೆ ಸಜ್ಜಾಗಿದ್ದ ಉಗ್ರರ ಏಳು ನೆಲೆಗಳ ಭೂ ದೃಶ್ಯಗಳನ್ನು ಭಾರತೀಯ ಸೇನೆಗೆ ರವಾನಿಸಿ ಭಯೋತ್ಪಾದಕರ ಸಂಹಾರಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಖಗೋಳ ವಿಜ್ಞಾನದಲ್ಲಿ ಮಾತ್ರ ಸಂಚಲನ ಮೂಡಿಸುತ್ತಿಲ್ಲ, ಅದರ ಕಾರ್ಯಕ್ಷೇತ್ರ ವ್ಯಾಪ್ತಿ ಬಹುದೊಡ್ಡದು. ಭಾರತಕ್ಕೆ ಮಗ್ಗುಲ ಮುಳ್ಳಾಗಿರುವ ಉಗ್ರರನ್ನು ಸಂಹರಿಸಲು ಭಾರತದ ಕಮಾಂಡೋಗಳು ನಡೆಸಿದ ಸೀಮಿತ ದಾಳಿಯಲ್ಲೂ ಇಸ್ರೋ ಮಹತ್ವದ ಪಾತ್ರ ವಹಿಸಿದೆ.

ಭಾರತೀಯ ಸೇನೆ ಸೆ.29ರಂದು ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಏಳು ಉಗ್ರಗಾಮಿ ನೆಲೆಗಳನ್ನು ಧ್ವಂಸ ಮಾಡಿತು. ಆದರೆ ಈ ಕಾರ್ಯಾಚರಣೆಯಲ್ಲಿ ತನ್ನ ಪಾತ್ರವನ್ನು ಇಸ್ರೋ ರಹಸ್ಯವಾಗಿಟ್ಟಿತ್ತು. ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಇಸ್ರೋ ವಹಿಸಿದ ಗಮನಾರ್ಹ ಪಾತ್ರವನ್ನು ಬಾಹ್ಯಾಕಾಶ ಸಂಸ್ಥೆಯ ಇಬ್ಬರು ವಿಜ್ಞಾನಿಗಳು ಬಹಿರಂಗಗೊಳಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೆಲವು ನಿರ್ದಿಷ್ಟ ಪ್ರದೇಶಗಳ ಹೈ ರೆಸೊಲ್ಯೂಷನ್ ಇಮೇಜ್‍ಗಳೊಂದಿಗೆ ದತ್ತಾಂಶ ಮಾಹಿತಿಗಳನ್ನು ಕಾರ್ಟೊಸ್ಯಾಟ್-2ಸಿ ಮೊದಲ ಬಾರಿಗೆ ಸೇನೆಗೆ ರವಾನಿಸಿತ್ತು. ಉಗ್ರರ ಸಂಹಾರಕ್ಕೆ ಇದು ನೆರವು ನೀಡಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿರುವ ಇಸ್ರೋ ಭಾರತೀಯ ಸೇನೆ ಸೇವೆಗಳಿಗೂ ಸಹಾಯ ಮಾಡುತ್ತಾ ದೇಶ ರಕ್ಷಣೆಯಲ್ಲಿ ತೊಡಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin