ಸರ್ಜಿಕಲ್ ಸ್ಟ್ರೈಕ್ ವೇಳೆ ಬಂಧಿತನಾಗಿದ್ದ ಯೋಧ ಚಂದು ಬಾಬುಲಾಲ್’ನನ್ನ ಬಿಡುಗಡೆ ಮಾಡಿದ ಪಾಕ್

ಈ ಸುದ್ದಿಯನ್ನು ಶೇರ್ ಮಾಡಿ

Chandu-Babulal

ಹೊಸದಿಲ್ಲಿ. ಜ.21 : ಕಳೆದ ವರ್ಷ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ವೇಳೆ ಆಕಸ್ಮಿಕವಾಗಿ ಪಾಕ್ ಗಡಿಯನ್ನು ಪ್ರವೇಶಿಸಿ ಬಂಧಿತನಾಗಿದ್ದ ಭಾರತೀಯ ಯೋಧ ಚಂದು ಬಾಬುಲಾಲ್ ಚೌಹಾಣ್ ರನ್ನು ಪಾಕ್ ಇಂದು ಬಿಡುಗಡೆ ಮಾಡಿದೆ. ಭಾರತೀಯ ಯೋಧ ಚಂದು ಬಾಬುಲಾಲ್ ಚೌಹಾಣ್ ಕಳೆದ ವರ್ಷ ಸೆಪ್ಟಂಬರ್ 29ರಂದು, ಅಂದರೆ ಭಾರತೀಯ ವಿಶೇಷ ಸೈನಿಕರು ಪಾಕ್ ಗಡಿಯೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮರುದಿನ, ಆಕಸ್ಮಿಕವಾಗಿ ಆಗಿ ಪಾಕ್ ಗಡಿಯನ್ನು ಪ್ರವೇಶಿಸಿದ್ದ, ಆಗ ಪಾಕ ಸೈನಿಕರು ಅವರನ್ನು ಬಂಧಿಸಿದ್ದರು.

ಪಾಕಿಸ್ತಾನ ಗಡಿಯೊಳಕ್ಕೆ ನುಸುಳಿ ಅಲ್ಲಿ ಸೆರೆ ಸಿಕ್ಕಿರುವ ಯೋಧ ಚಂದು ಚವ್ಹಾಣ್ ಬಗ್ಗೆ ಮಾಹಿತಿ ಕಲೆಹಾಕಿದ್ದ ಭಾರತದ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು ಪಾಕಿಸ್ತಾನದ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕರೊಂದಿಗೆ ಯೋಧನ ಬಿಡುಗಡೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದರು. 22 ವರ್ಷದ ಯೋಧ ಚಂದು ಚವ್ಹಾಣ್ ಅವರನ್ನು ಮಾನವೀಯತೆ ಆಧಾರದ ಮೇಲೆ ವಾಗಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಒಪ್ಪಿಸುವುದಾಗಿ ಪಾಕ್ ಸೇವೆ ಪ್ರಕಟಣೆಯಲ್ಲಿ ತಿಳಿಸಿದೆ.  ಕಳೆದ ಡಿ.25ರರಂದು, ಅಂದರೆ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಹುಟ್ಟುಹಬ್ಬದ ದಿನದಂದು ಪಾಕ್ ಸೇನೆ ತನ್ನ ಸೆರೆಯಲ್ಲಿದ್ದ 220 ಭಾರತೀಯ ಬೆಸ್ತರನ್ನು ಸದ್ಭಾವನೆಯ ಕ್ರಮವಾಗಿ ಬಿಡುಗಡೆಮಾಡಿತ್ತು.

ಈ ಮೂಲಕ ಭಾರತ ಮತ್ತು ಪಾಕ್ ನಡುವಿನ ಸಂಬಂಧಗಳ ನಡುವೆ ಒಂದು ಆಶಾದಾಯಕ ಬೆಳವಣಿಗೆ ಕಂಡುಬಂದಿದೆ. ಇದು ಮುಂದೆ ಯಾವ ರೀತಿ ಪರಿಣಾಮ ಬೀರುವುದೋ ಕಾದುನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin