ಸರ್ವತೋಮುಖ ಬೆಳವಣಿಗೆಗೆ ಪೌಷ್ಠಿಕ ಆಹಾರ ಸೇವನೆ ಅಗತ್ಯ : ಪಿ.ಓಂಕಾರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

tipturu-6

ತಿಪಟೂರು, ಸೆ.6- ಪ್ರತಿಯೊಬ್ಬ ವ್ಯಕ್ತಿಯು ತನ್ನ ದಿನನಿತ್ಯದ ಜೀವನದಲ್ಲಿ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸುವುದು ಅಗತ್ಯ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಿ.ಓಂಕಾರಪ್ಪ ತಿಳಿಸಿದರು.ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹದ ಅಂಗವಾಗಿ ಮೊದಲನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಿನನಿತ್ಯ ಸೇವಿಸುವ ಆಹಾರದಲ್ಲಿ ಸೊಪ್ಪು, ತರಕಾರಿ, ಮೊಳಕೆಕಾಳು, ಬೇಳೆಕಾಳು, ಏಕದಳ, ದ್ವಿದಳ ಧಾನ್ಯಗಳು, ಹಣ್ಣು ಹಂಪಲುಗಳುಗಳನ್ನು ಸೇವಿಸುವುದರಿಂದ ಉತ್ತಮ ಪೌಷ್ಠಿಕಾಂಶಗಳು ದೊರೆಯುತ್ತದೆ ಎಂದರು.

ಮುಖ್ಯವಾಗಿ ಗರ್ಭಿಣಿ, ಬಾಣಂತಿ, ಮಕ್ಕಳಿಗೆ ಪೌಷ್ಠಿಕ ಆಹಾರದ ಅಂದರೆ ಸಮತೂಕದ ಆಹಾರದ ಅಗತ್ಯತೆ ಕುರಿತು ಮಾಹಿತಿ ನೀಡಿ ಅಂಗನವಾಡಿ ಕೇಂದ್ರಗಳಿಂದ ದೊರೆಯುವ ಪೌಷ್ಠಿಕ ಆಹಾರ ಹಾಗೂ ಇತರೆ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಪಡೆಯಲು ಮಾಹಿತಿ ನೀಡಿದರು.  ಇಲಾಖೆಯ ಮೇಲ್ವಿಚಾರಕಿ ಬಸಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತೀ ವರ್ಷ ಸೆಪ್ಟೆಂಬರ್ ಮಾಹೆಯ 1ನೇ ತಾರೀಖಿನಿಂದ 7ರ ವರೆಗೆ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವನ್ನು ಆಚರಿಸಿ ಪೌಷ್ಠಿಕ ಆಹಾರದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಪರಿಸರ ಪೌಷ್ಠಿಕ ಮಾಹಿತಿದಾರ ಮುರಳೀಧರ್ ಗುಂಗರಮಳೆ, ಹೊನ್ನವಳ್ಳಿ ಗ್ರಾಪಂ ಅಧ್ಯಕ್ಷ ಸುರೇಶ್ , ಸುವರ್ಣಮ್ಮ, ಆಯೋಗ್ಯ ಇಲಾಖೆಯ ಯೋಗಾನಂದ್, ಗ್ರಾಪಂ ಸದಸ್ಯರಾದ ಆನಂದ್, ನೇತ್ರಾವತಿ, ಶಾಲಾ ಶಿಕ್ಷಕಿ ಮಂಜುಳ, ಗಾಯಿತ್ರಿ ಎಂ.ಜಿ, ಅಂಗನವಾಡಿ ಕಾರ್ಯಕರ್ತೆ ಶಮಂತ ಮತ್ತಿತರರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin