ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

1

ಬಾಗಲಕೋಟೆ,ಫೆ.3- ತಾಲ್ಲೂಕಿನ ಮನ್ನಿಕಟ್ಟಿ ಗ್ರಾಮದ ಸಿದ್ಧಲಿಂಗ ಶಿವಯೋಗಾಶ್ರಮದ ಶಿವಕುಮಾರ ಶ್ರೀಗಳವರ ಸಮಾಜಸೇವಾ ದೀಕ್ಷಾ ಹಾಗೂ ಶರಣ ಸಂಸ್ಕೃತಿ  ಸಮ್ಮೇಳನ ಹಾಗೂ 11ನೇ ವರ್ಷದ ಸರ್ವಧರ್ಮ ಸಾಮೂಹಿಕ ವಿವಾಹಗಳ ಮಹೋತ್ಸವ ಇದೇ 5ರಂದು ಜರುಗಲಿದೆ ಎಂದು ಶರಣ ಸಂಸ್ಕೃತಿ  ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷ ಜಿ.ಎನ್. ಪಾಟೀಲ ತಿಳಿಸಿದರು.ನವನಗರದ ಪತ್ರಿಕಾಭವನದಲ್ಲಿ ನಿನ್ನೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಸಂಜೆ 4.30ಕ್ಕೆ ನಡೆಯುವ ಮಹಿಳಾ ಸಮಾವೇಶವನ್ನು ನಗರದ ಮಾತೋಶ್ರೀ ಪಾರ್ವತಮ್ಮ ತಾಯಿ ಬಳೂಲಮಠ ಉದ್ಘಾಟಿಸುವರು. ಸಾನಿಧ್ಯವನ್ನು ನಂದನೂರಿನ ಬಸವ ಯೋಗಾಶ್ರಮದ ಮಾತೆ ಸತ್ಯವತಿದೇವಿ ವಹಿಸುವರು. ಅಧ್ಯಕ್ಷತೆಯನ್ನು ಧಾರವಾಡ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷೆ ದಾಕ್ಷಾಯಿಣಿ ಹುಬ್ಬಳ್ಳಿ ವಹಿಸುವರು.

5ರಂದು ಬೆಳಿಗ್ಗೆ 4.30ಕ್ಕೆ ನಡೆಯುವ ಸಮಾಜಸೇವಾ ದೀಕ್ಷಾ ಸಂಸ್ಕಾರ ಸಮಾರಂಭದ ಸಾನಿಧ್ಯವನ್ನು ಹುಬ್ಬಳ್ಳಿಯ ಬ್ರಹನ್ ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜಯೋಗೇಂದ್ರ ಸ್ವಾಮೀಜಿ, ದೇವರಹಿಪ್ಪರಗಿಯ ಗದ್ದುಗೆಮಠದ ಮಡಿವಾಳೇಶ್ವರ ಸ್ವಾಮೀಜಿ, ಮಹಾಂತ ಶ್ರೀಗಳು, ಕಂಪ್ಲಿಯ ಕಲ್ಮಠದ ಪ್ರಭು ಸ್ವಾಮೀಜಿ, ಹೊಸಮಠದ ನಾಗಭೂಷಣ ಸ್ವಾಮೀಜಿ, ಸಿಂದಗಿಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಕೊಕಟನೂರ ವಿರಕ್ತಮಠದ ಮಡಿವಾಳೇಶ್ವರ ಸ್ವಾಮೀಜಿ ವಹಿಸುವರು.ಅಂದು ಬೆಳಿಗ್ಗೆ 9.30ಕ್ಕೆ ಸಕಲ ವಾಧ್ಯ, ವೈಭವ, ಕಲಾತಂಡ, ಕುಂಭ ಹೊತ್ತ ಸುಮಂಗಲೆಯರೊಂದಿಗೆ ಶ್ರೀಗಳ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.ಬೆಳಿಗ್ಗೆ 11.30ಕ್ಕೆ ಶ್ರೀಗಳವರ ಪೀಠಾರೋಹಣ ಮತ್ತು ಧರ್ಮಸಭೈಯ ದಿವ್ಯ ಸಾನಿಧ್ಯವನ್ನು ಇಳಕಲ್ಲ-ಚಿತ್ತರಗಿ ಸಂಸ್ಥಾನಮಠದ ಮಹಾಂತ ಸ್ವಾಮೀಜಿ, ನಿಡಸೋಸಿ ಚರಂತಿಮಠದ ಸಿದ್ಧ ಸಂಸ್ಥಾನಮಠದ ಪಂಚಮಲಿಂಗೇಶ್ವರ ಸ್ವಾಮೀಜಿ ವಹಿಸುವರು.

ಅಧ್ಯಕ್ಷತೆಯನ್ನು ಶಾಸಕ ಎಚ್.ವೈ. ಮೇಟಿ ವಹಿಸುವರು. ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಶಿವಯೋಗಾಶ್ರಮವನ್ನು ಉದ್ಘಾಟಿಸುವರು. ಶಿವಪಥ ಅಭಿನಂದನಾ ಗ್ರಂಥವನ್ನು ವಿಪ ಸದಸ್ಯ ಎಸ್.ಆರ್. ಪಾಟೀಲ ಬಿಡುಗಡೆ ಮಾಡಲಿದ್ದಾರೆ. ದಿವ್ಯ ಪ್ರಭೈ ಸ್ಮರಣ ಸಂಚಿಕೆಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಬಿಡುಗಡೆ ಮಾಡಲಿದ್ದಾರೆ. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ನ್ಯಾಮಗೌಡ, ಹನಮಂತ ನಿರಾಣಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯ ಕುಮಾರ ಸರನಾಯಕ, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಮಧ್ಯಾಹ್ನ 3.30ಕ್ಕೆ ಕನ್ನಡ ನಾಡು ನುಡಿ ಕುರಿತು ಚಿಂತನ ಗೋಷ್ಠಿ ನಡೆಯಲಿದೆ ಎಂದು ಹೇಳಿದರು.ಎಸ್.ಜಿ. ಕೋಟಿ, ರಂಗನಗೌಡ ದಂಡಣ್ಣವರ, ಶಿವಕುಮಾರ ನಂದಿಕೋಲಮಠ, ಮುತ್ತು ಚವ್ಹಾಣ್, ಸಿದ್ಧಣ್ಣ ಗೋಡಿ, ಮುತ್ತು ಜೋಳದ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin