ಸರ್, ನಿಮಗೆ ಪೊಲೀಸ್ ಆಗ್ಬೇಕು ಅಂತಾ ಯಾಕ್ ಅನ್ನಸ್ತು..?

ಈ ಸುದ್ದಿಯನ್ನು ಶೇರ್ ಮಾಡಿ

ಗದಗ,ಫೆ.8- ನಾನೂ ಸಣ್ಣವನಿದ್ದಾಗ ಇಂತದ್ದೆ ಆಗಬೇಕು ಅಂತಾ ಏನು ಅನ್ಕೊಂಡಿದ್ದಿರ್ಲಿಲ್ಲಾ, ನಾನು ಲಾಸ್ಟ ಬೆಂಚ್ ಸ್ಟೂಡೆಂಟ್ ಆಗಿದ್ದೆ. ಕಾಲೇಜಿನಲ್ಲಿ ಓದ್ತಿರಬೇಕಾದ್ರೆ ಸಮಾಜವನ್ನ ಸುಧಾರಿಸೋಕೆ ಮತ್ತು ತಪ್ಪಿತಸ್ತರಿಗೆ ಶಿಕ್ಷೆ ಕೊಡೋಕೆ ಪೊಲೀಸರಿಗೆ ಮಾತ್ರಾ ಸಾಧ್ಯಾ ಇರೋದು ಅನ್ನಸ್ತು. ಅದಕ್ಕೆ ಪೊಲೀಸ್ ಕೆಲಸಾ ಇಷ್ಟವಾಗಿ ಪೊಲೀಸ್ ಆದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷಬಾಬು ಅವರು ಮಕ್ಕಳ ಜೊತೆಗಿನ ಸಂವಾದದಲ್ಲಿ ಹೇಳಿದರು.ಅವರು ತಾಲೂಕು ನೀರಲಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳೊಂದಿಗೆ ನಡೆದ ಸಂವಾದದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.ಸರ್, ನೀವು ಇಡೀ ಜಿಲ್ಲೆಯನ್ನ ಹೇಗೆ ನೋಡ್ಕೋತೀರಿ..? ಸರ್, ನಿಮ್ ತರಾ ಆಗಬೇಕು ಅಂದ್ರೇ ಏನ್ ಮಾಡಬೇಕು? ಫೀಲ್‍ನಲ್ಲಿ ಫೈಟಿಂಗ್ ಮಾಡೋತರಾ ನೀವು ಮಾಡ್ತೀರಾ ಫೈಟಿಂಗ್ ಸರ್…

ಹೀಗೆ ಒಂದೊಂದೆ ಪ್ರಶ್ನೆಗಳನ್ನ ಮಕ್ಕಳು ಕೇಳುತ್ತಿದ್ದಂತೆ ನಿಧಾನವಾಗಿ ಮಕ್ಕಳ ಮಟ್ಟಕ್ಕಿಳಿದು ಉತ್ತರಿಸುತ್ತಾ ಅವರು ಕೇಳುವ ಅರ್ಧಂಬರ್ಧ ಪ್ರಶ್ನೆಗಳಿಗೂ ತಾವೇ ಸುಧಾರಿಸಿ ಉತ್ತರಿಸುತ್ತಾ ವೈಯಕ್ತಿಕ ಬಾಲ್ಯದ ಆಟ, ಪಾಠ, ತುಂಟಾಟದ ಬಗ್ಗೆ ಸಹಜವಾಗಿ ಹೇಳುತ್ತಾ, ನಿಮಗೆ ನನ್ನಷ್ಟು ತುಂಟತನಾ ಮಾಡ್ಲಿಕ್ಕೆ ಬರೋದಿಲ್ಲಾ ಎಂದು ಮಕ್ಕಳನ್ನು ತಬ್ಬಿಬ್ಬಾಗುವಂತೆ ಮಾಡಿದರು.ಚೆನ್ನಾಗಿ ಆಟವನ್ನ ಆಡಿ, ಸಂಗೀತವನ್ನ ಕೇಳಿ, ಒಳ್ಳೆಯ ಪುಸ್ತಕವನ್ನ ಓದಿ, ಬಾಲ್ಯವನ್ನ ಖುಷಿ ಖುಷಿಯಾಗಿ ಕಳೆಯಿರಿ, ಸಾಹಸ ಪ್ರವೃತ್ತಿಯನ್ನ ಬೆಳೆಸಿಕೊಂಡು ಇತರರಿಗೆ ಮಾದರಿಯಾಗಿರಿ ಎಂದು ಸಂತೋಷಬಾಬುರವರು ಕಿವಿಮಾತು ಹೇಳಿದರು.ಪತ್ರಕರ್ತ ಮಂಜುನಾಥ ಬಮ್ಮನಕಟ್ಟಿ ಮಾತನಾಡುತ್ತಾ ಮಕ್ಕಳು ಇಂತಹ ದೊಡ್ಡ ವ್ಯಕ್ತಿಗಳೊಂದಿಗೆ ಬೆರೆಯುವುದರಿಂದ ಅವರ ಮಾನಸಿಕ ಬೌದ್ಧಿಕ ಮಟ್ಟ ಹೆಚ್ಚಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin