ಸಲ್ಲು ಜತೆ ನಟಿಸಲು ನಾನ್ ರೆಡಿ : ಐಶ್ವರ್ಯ ಬಚ್ಚನ್

ಈ ಸುದ್ದಿಯನ್ನು ಶೇರ್ ಮಾಡಿ

aishu

ಸೂಪರ್ ಸ್ಟಾರ್‍ಗಳಾದ ಐಶ್ವರ್ಯ ರೈ ಬಚ್ಚನ್ ಮತ್ತು ಸಲ್ಮಾನ್ ಖಾನ್ ಮತ್ತೆ ಬೆಳ್ಳಿ ತೆರೆ ಒಟ್ಟಿಗೆ ಕಾಣಿಸಿಕೊಳ್ಳುವುದು ಬಹುತೇಕ ಅಸಾಧ್ಯ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿರುವಾಗಲೇ ಚಕಿತಗೊಳಿಸುವ ಸುದ್ದಿಯೊಂದು ತೇಲಿ ಬಂದಿದೆ. ಸಲ್ಲು ಜೊತೆ ಸಿಲ್ವರ್ ಸ್ಕೀನ್ ಹಂಚಿಕೊಳ್ಳಲು ನನ್ನದೇನೂ ಅಭ್ಯಂತರವಿಲ್ಲ ಎಂದು ಐಶ್ ಹೇಳಿ ಅಚ್ಚರಿ ಮೂಡಿಸಿದ್ದಾಳೆ. ಸಲ್ಮಾನ್ ಖಾತೆ ಜೊತೆ ನಾನು ಮತ್ತೆ ನಟಿಸಲು ಸಿದ್ಧ. ಆದರೆ ನನ್ನದೊಂದು ಷರತ್ತು ಇದೆ. ಈ ಚಿತ್ರದ ಸ್ಕ್ರಿಪ್ಟ್ ಮತ್ತು ಡೈರೆಕ್ಟರ್ ಎಕ್ಸ್‍ಟ್ರಾಆರ್ಡಿನರಿ ಆಗಿರಬೇಕು ಎಂದು ಸಿನಿ ನಿಯತಕಾಲಿಕವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ತಿಳಿಸಿದ್ದಾಳೆ.

ಸಲ್ಲು ಜೊತೆ ನಟಿಸಲು ಓಕೆ ಎಂದು ಐಶ್ ಹೇಳಿದ್ದರೂ ಆಕೆಯೊಂದಿಗೆ ಅಭಿನಯಿಸಲು ಖಾನ್‍ಗೆ ಆಸಕ್ತಿ ಇಲ್ಲವೆಂದು ಸಿನಿ ಪಂಡಿತರು ವಿಶ್ಲೇಷಿಸಿದ್ದಾರೆ. ಸಲ್ಮಾನ್ ಖಾನ್‍ನ ಬಿಗ್‍ಬಾಸ್ ಅ.16ರಿಂದ ಪ್ರಸಾರವಾಗಲಿದ್ದು, ತನ್ನ ಹೊಸ ಸಿನಿಮಾ ಆಯಿ ದಿಲ್ ಹೈ ಮುಷ್ಕಿಲ್ ಚಿತ್ರದ ಪ್ರೊ ಮೋಷನ್‍ಗಾಗಿ ಬಿಗ್‍ಬಾಸ್ ಶೋನಲ್ಲಿ ಐಶು ಕಾಣಿಸಿಕೊಳ್ಳುವ ಸಾಧ್ಯತೆ ಎಂದು ಅಭಿಮಾನಿಗಳು ಅಪಾರ ನಿರೀಕ್ಷೆ ಹೊಂದಿದ್ದಾರೆ. ಆಕೆ ಸಲ್ಲು ಶೋ ನಲ್ಲಿ ಭಾಗವಹಿಸಿದ್ದೇ ಆದರೆ, ಹಮ್ ದಿಲ್ ದೆ ಚುಕೆ ಸನಂ ನೆನೆಪು ಇಬ್ಬರನ್ನೂ ಕಾಡಬಹುದು.

 

► Follow us on –  Facebook / Twitter  / Google+

Facebook Comments

Sri Raghav

Admin