ಸಸ್ಪೆನ್ಸ್ ಥ್ರಿಲ್ಲರ್‍ನ ‘ಡೇಂಜರ್ ಜೋನ್’

ಈ ಸುದ್ದಿಯನ್ನು ಶೇರ್ ಮಾಡಿ

Danger

ಸಸ್ಪನ್ಸ್, ಹಾರರ್ ಚಿತ್ರ ಡೇಂಜರ್ ಜೋನ್ ಹೊಸಬರೆ ಸೇರಿಕೊಂಡು ಸಿದ್ದಪಡಿಸಿದ್ದಾರೆ. ಈ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಯುವಕರು ಪ್ರಯಾಣ ಮಾಡುವಾಗ ಡೇಂಜರ್ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ಅಪರೂಪದ ಘಟನೆಯನ್ನು ನೋಡಿ ಎಲ್ಲರೂ ಬೆಚ್ಚಿಬೀಳುತ್ತಾರೆ. ಇದರಿಂದ ಕತೆ ತೆರೆದುಕೊಳ್ಳುತ್ತದೆ. ಮಂಗಳೂರಿನಲ್ಲಿ ಆರ್‍ಜೆ ಆಗಿರುವ ರೂಪ್‍ಶೆಟ್ಟಿ ನಾಯಕ ಮತ್ತು ರಮ್ಯಾ ನಾಯಕಿ. ಖಳನಟನಾಗಿ ಅಭಿನಯಿಸಿದ್ದ ಉದಯ್ ಮರ ಕಡಿಯುವ ಪಾತ್ರದಲ್ಲಿ ಅಭಿನಯಿಸಿದ್ದು, ಮೊದಲ ಬಾರಿ ಗ್ಲಾಮರ್ ಸಾಂಗ್‍ನಲ್ಲಿ ಬಾಂಬೆ ಬೆಡಗಿ ಸುಪ್ರಕಾವ್ಯ ಜೊತೆ ಹೆಜ್ಜೆ ಹಾಕಿದ್ದಾರೆ. ಇದಕ್ಕಾಗಿ ಅವರು ದೇಹವನ್ನು 45 ದಿನಗಳ ಕಾಲ ದಂಡಿಸಿದ್ದು ತೆರೆಮೇಲೆ ಚೆನ್ನಾಗಿ ಮೂಡಿಬಂದಿದೆಯಂತೆ.

ಉಳಿದ ತಾರಬಳಗದಲ್ಲಿ ಅಭಿಷೇಕ್, ಚೇತನ್, ವಿಶ್ವ ನಟಿಸಿದ್ದಾರೆ. ಚಿಕ್ಕಮಗಳೂರು, ಸಕಲೇಶಪುರ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಹಾಯಕ ನಿರ್ದೇಶಕ ಮನ್ವರ್ಷಿ ರಚಿಸಿದ ಶಂಕರ್‍ಮಹದೇವನ್ ಕಂಠಸಿರಿಯಲ್ಲಿ ಮೂಡಿಬಂದಿರುವ ಶ್ರೀಗಂಧ ದೇವತೇ ಹಾಡನ್ನು ಯುಟ್ಯೂಬ್‍ನಲ್ಲಿ ಸುಮಾರು 22 ಲಕ್ಷ ಮಂದಿ ವೀಕ್ಷಣೆ ಮಾಡಿದ್ದರಿಂದ ಚಿತ್ರಕ್ಕೆ ಅದ್ಬುತ ಪ್ರಚಾರ ಸಿಕ್ಕಿದೆ. ಸತೀಶ್‍ಆರ್ಯನ್ ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 15 ನಿಮಿಷ ಕ್ಲೈಮ್ಯಾಕ್ಸ್ ದೃಶ್ಯಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಸಂಕಲನ ಶ್ರೀಧರ್, ಛಾಯಗ್ರಹಣ ವೀನಸ್‍ಮೂರ್ತಿ ಅವರದಾಗಿದೆ. ಸಿ ಮ್ಯೂಸಿಕ್ ಸಂಸ್ಥೆಯು ಹಾಡುಗಳನ್ನು ಹೂರತಂದಿದೆ. ಸ್ವಾಗತ್‍ಗೌಡ ಮತ್ತು ರಾಮು 1.30 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಿನಿಮಾವು ಶುಕ್ರವಾರ ದಂದು 60 ಕೇಂದ್ರ ಗಳಲ್ಲಿ ಬಿಡು ಗಡೆಯಾಗಲಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin