ಸಹಾಯ ಹಸ್ತಕ್ಕಾಗಿ ಎದುರುನೋಡುತ್ತಿದ್ದಾರೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹಿರಿಯ ನಿರ್ದೇಶಕ ಎ.ಟಿ.ರಘು

ಈ ಸುದ್ದಿಯನ್ನು ಶೇರ್ ಮಾಡಿ

Rafhu

ಬೆಂಗಳೂರು, ಮಾ.8- ಹಿರಿಯ ನಿರ್ದೇಶಕ ಎ.ಟಿ.ರಘು ಅವರು ತಮ್ಮ ಎರಡೂ ಮೂತ್ರ ಪಿಂಡಗಳ ವೈಫಲ್ಯದಿಂದ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಅವರು ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯಕೀಯ ವೆಚ್ಚವನ್ನು ಭರಿಸುವುದು ದುಸ್ತರವಾಗಿದೆ.
ಕಾಲ ಮಿಂಚುವ ಮೊದಲು ಸಿನಿಮಾದವರು ಎಚ್ಚೆತ್ತುಕೊಳ್ಳು ವುದು ಸೂಕ್ತ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ ಮುಂತಾದ ಸಂಘ-ಸಂಸ್ಥೆಗಳು ಈ ಕೂಡಲೇ ರಘು ಅವರ ನೆರವಿಗೆ ಧಾವಿಸುವ ಅಗತ್ಯವಿದೆ. ರಘು ಅವರು ಮಾಡಿದ ಸಿನಿಮಾಗಳ ಮೂಲಕ ಬೆಳಕಿಗೆ ಬಂದ ಹಲವರು ಇಂದು ಆರ್ಥಿಕವಾಗಿ ಸದೃಢವಾಗಿದ್ದು, ಅವರಿಗೂ ಕೂಡ ರಘು ಅವರಿಗೆ ಸಹಾಯ ಮಾಡುವ ನೈತಿಕ ಹೊಣೆಗಾರಿಕೆಯಿದೆ.

ರಘು ಅವರು ಅಂಬರೀಶ್ ಅವರ ಚಿತ್ರಗಳನ್ನು ಹೆಚ್ಚಾಗಿ ನಿರ್ದೇಶಿಸಿದ್ದು, ಅವುಗಳಲ್ಲಿ ಶಂಕರ್ ಸುಂದರ್, ಗೂಂಡಾಗುರು, ಗುರು ಜಗದ್ಗುರು, ಇನ್ಸ್‍ಪೆಕ್ಟರ್ ಕ್ರಾಂತಿಕುಮಾರ್, ಮೈಸೂರು ಜಾಣ, ಸೂರ್ಯೋದಯ, ಮಂಡ್ಯದ ಗಂಡು ಸೇರಿದಂತೆ ಹಲವು ಚಿತ್ರಗಳಲ್ಲಿ ಯಶಸ್ಸನ್ನು ತಂದು ಕೊಟ್ಟಿದ್ದಾರೆ.
ಸಹೃದಯಿಗಳು ರಘು ಅವರಿಗೆ ನೆರವಾಗಲು ಇದು ಸಕಾಲ. ಆಸಕ್ತಿಯುಳ್ಳವರು 900064 3345 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ವಿವರ ಪಡೆಯ ಬಹುದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin