ಸಹೋದರತೆ ಬೆಸೆಯಲು ರಕ್ಷಾ ಬಂಧನ ಸಹಕಾರಿ

ಈ ಸುದ್ದಿಯನ್ನು ಶೇರ್ ಮಾಡಿ

arakalagudu-5

ಅರಕಲಗೂಡು, ಆ.20- ಸಹೋದರತೆ ಬೆಸೆಯುವುದರಿಂದ ಸಮಾಜದಲ್ಲಿ ಶಾಂತಿಯುತ ಬದುಕಿಗೆ ನಾಂದಿ ಹಾಡುತ್ತದೆ. ವರ್ತಮಾನದಲ್ಲಿ ಪರಸ್ಪರರ ಬಗೆಗೆ ವಿಶ್ವಾಸಗಳೇ ಇಲ್ಲದಂತಾಗಿದೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಮನಸ್ಸುಗಳನ್ನು ಬೆಸೆಯುವ ಮತ್ತು ಶಾಂತಿಯುತ ಬದುಕಿಗೆ ಅವಕಾಶ ಕಲ್ಪಿಸುವ ಪ್ರಯತ್ನವನ್ನು ರಕ್ಷಾ ಬಂಧನ ಮಾಡುತ್ತಿದೆ ಎಂದು ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಪ್ರವೀಣ್ ತಿಳಿಸಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಹಿಳಾ ಕಾರ್ಯಕರ್ತರು ನಿವೃತ್ತ ಯೋಧರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ದಿವಸ್ ಆಚರಿಸಿದ ವೇಳೆ ಮಾತನಾಡಿದರು. ಈ ಮೂಲಕ ಪರಸ್ಪರರನ್ನು ಗೌರವಿಸುವ ಹಾಗೂ ರಕ್ಷಿಸುವ ಕೆಲಸ ಆಗ ಬೇಕಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ನಿವೃತ್ತ ಯೋಧರು, ಭಾರತೀಯ ಮಿಲಿಟರಿ ಸೇನೆ ಸೇರಿದ ನಂತರವಷ್ಟೇ ನಮಗೆ ದೇಶಭಕ್ತಿ ಬಗ್ಗೆ ಅರಿವಾಗಿದ್ದು, ಸೈನಿಕರು ಸತ್ತ ಮೇಲೆ ಗೌರವ ಕೊಡುವ ಬದಲು ವೃತ್ತಿ ಸಮಯದಲ್ಲಿ ಹಾಗೂ ನಿವೃತ್ತಿ ನಂತರ ಅವರನ್ನು ಗೌರವಿಸುವುದು ಮುಖ್ಯ, ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ನಮ್ಮನ್ನು ಗುರುತಿಸಿ ರಾಖಿ ಕಟ್ಟಿ ಗೌರವಿಸಿರುವುದು ಸಂತೋಷದ ಸಂಗತಿ. ನಮ್ಮ ಜೀವಮಾನದಲ್ಲಿ ಇದು ಮರೆಯಲಾಗದ ಸಂತಸದ ಕ್ಷಣ ಎಂದು ಹರ್ಷ ವ್ಯಕ್ತಪಡಿಸಿದರು.
ನಿವೃತ್ತ ಯೋಧರಾದ ಅರಕಲಗೂಡಿನ ರಾಮಕೃಷ್ಣ, ಅಂಕನಾಯಕನಹಳ್ಳಿ ಮನೋಹರ್, ಸಾಲುಗೊಪ್ಪಲು ಅರುಣಕುಮಾರ್ ಅವರಿಗೆ ಪಕ್ಷದ ಮಹಿಳಾ ಕಾರ್ಯಕರ್ತರು ರಾಖಿ ಕಟ್ಟಿ ಗೌರವಿಸಿದರು.ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್ ವಾಟಾಳ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಿವಲಿಂಗ ಶಾಸ್ತ್ರಿ, ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷ ಲೋಕೇಶ್ ಮಾತನಾಡಿದರು.ತಾಪಂ ಮಾಜಿ ಅಧ್ಯಕ್ಷೆ ಗೌರಮ್ಮ, ಪಕ್ಷದ ಮಹಿಳಾ ಕಾರ್ಯಕರ್ತೆಯರಾದ ರೇಷ್ಮಾಬಾನು, ನಳಿನಿ ಮುಂತಾದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin