ಸಾಂಪ್ರದಾಯಿಕ  ಎದುರಾಳಿ ಪಾಕ್ ವಿರುದ್ಧ ಭಾರತಕ್ಕ 124 ರನ್ ಗಳ ಜಯ

ಈ ಸುದ್ದಿಯನ್ನು ಶೇರ್ ಮಾಡಿ

BIRMINGHAM, ENGLAND - JUNE 04: MS Dhoni of India shakes hands with Hasan Ali of Pakistan after his sides 124 run victory on the D/L Method during the ICC Champions Trophy match between India and Pakistan at Edgbaston on June 4, 2017 in Birmingham, England. (Photo by Michael Steele/Getty Images)

ಬರ್ಮಿಂಗ್ಹ್ಯಾಮ್, ಜೂ.05 : ಬರ್ಮಿಂಗ್ಹ್ಯಾಮ್’ನ ಎಡ್ಜ್ಬಾಸ್ಟನ್’ನ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 4ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಭಾರತ 124 ರನ್ ಗಳ ಅಂತರದಿಂದ (ಡಕ್ವರ್ಥ್ ಲೂಯಿಸ್ ನಿಯಮದಡಿ) ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ  ಭಾರತ ನೀಡಿದ್ದ 324 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನಕ್ಕೆ ಮಳೆ ಅಡ್ಡಿಯಾಗಿತ್ತು. ಆದರೆ ಬಳಿಕ ಮಳೆ ನಿಂತಾಗ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಪಂದ್ಯವನ್ನು 41 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಅಂತೆಯೇ ರನ್ ಗುರಿಯನ್ನು ಕೂಡ 41 ಓವರ್ ಗಳಿಗೆ 289 ರನ್ ಗಳು ಎಂದು ನಿಗದಿ ಪಡಿಸಲಾಯಿತು. ಈ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ಭಾರತೀಯ ಬೌಲರ್ ಗಳ ಕರಾರುವಕ್ಕಾದ ದಾಳಿಗೆ ತತ್ತರಿಸಿ 33.4 ಓವರ್ ಗಳಲ್ಲಿ ಕೇವಲ 164 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡಿತು.ಆರಂಭಿಕ ಆಟಗಾರ ಅಜರ್ ಅಲಿ(50) ಹಾಗೂ ಮಧ್ಯಮ ಕ್ರಮಾಂಕರ ಆಟಗಾರ ಮೊಹಮದ್ ಹಫೀಜ್(43) ಬಿಟ್ಟರೆ ಶೋಯಬ್ ಮಲಿಕ್ ಮತ್ತು ನಾಯಕ ಸರ್ಫ್ರಾಜ್ ಅಹ್ಮದ್ ಸೇರಿದಂತೆ ಯಾರೊಬ್ಬರು 29ರ ಗಡಿ ದಾಟಲಿಲ್ಲ. ಅಂತಿಮವಾಗಿ 9 ವಿಕೇಟ್ ನಷ್ಟಕ್ಕೆ 164 ರನ್’ಗಳಿಗೆ ಗಳಿಸಿದರು ಕೊನೆಯ ಕ್ರಮಾಂಕದ ಬ್ಯಾಟ್ಸ್’ಮೆನ್ ವಾಹಿಬ್ ರಿಯಾಜ್ ಗಾಯದಿಂದ ಆಟವಾಡದ ಕಾರಣ ಭಾರತಕ್ಕೆ ಗೆಲುವೆಂದು ಘೋಷಿಸಲಾಯಿತು.  ಟೀಂ ಇಂಡಿಯಾ ಪರ ಉಮೇಶ್ ಯಾದವ್ 3/30, ಹರ್ದಿಕ್ ಪಾಂಡ್ಯ 2/43,ರವೀಂದ್ರ ಜಡೇಜಾ 2/43 ಹಾಗೂ ಭುವನೇಶ್ವರ್ ಕುಮಾರ್ 1/23 ವಿಕೇಟ್ ಪಡೆದು ಭಾರತದ ಗೆಲುವಿನಲ್ಲಿ ಕಾರಣ ಕರ್ತರಾದರು.

ಇದಕ್ಕೂ ಮುನ್ನ ಟಾಸ್ ಸೋತ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ರಕ್ಷಣಾತ್ಮಕವಾಗಿ ಬ್ಯಾಟಿಂಗ್ ಪ್ರಾರಂಭಿಸಿದರು. 9.5 ಓವರ್’ನಲ್ಲಿ ಟೀಂ 52 ರನ್ ಗಳಿಸಿದ್ದಾಗ ಇರುವಾಗ ಮೊದಲ ಬಾರಿಗೆ ಮಳೆ ಬಂತು. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದು ಮತ್ತೆ ಆಟ ಶುರುವಾಯಿತು.  24.3 ಓವರ್’ಗಳಿದ್ದಾಗ ಶಿಖರ್ ಧವನ್, ಶದಾಬ್ ಖಾನ್ ಬೌಲಿಂಗ್’ನಲ್ಲಿ ಅಜರ್ ಅಲಿಗೆ ಕ್ಯಾಚಿತ್ತು ನಿರ್ಗಮಿಸಿದರು.65 ಎಸತಗಳಲ್ಲಿ ಸ್ಫೋಟಿಸಿದ ಇವರ 68 ರನ್’ಗಳಲ್ಲಿ 6 ಸಿಕ್ಸ್’ರ್ ಹಾಗೂ 1 ಬೌಂಡರಿಗಳಿದ್ದವು. ನಂತರ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಮೊದಮೊದಲು ನಿಧಾನಗತಿಯಲ್ಲಿ ಆಟವಾಡಿ, ಬ್ಯಾಟ್ ಬೀಸುತ್ತಿದ್ದ ರೋಹಿತ್ ಶರ್ಮಾಗೆ ನೆರವಾಗುತ್ತಿದ್ದರು.


91 ರನ್ ಗಳಿಸಿದ್ದಾಗ ಆಕಸ್ಮಿಕವಾಗಿ ರನ್ ಔಟ್ ರೋಹಿತ್ ಶರ್ಮಾ ರನ್ ಔಟ್ ಆದರು. 119 ಎಸತೆಗಳ ಇವರ ಖಾತೆಯಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿಗಳಿದ್ದವು. ನಂತರ ಯುವರಾಜ್ ಸಿಂಗ್ ಬ್ಯಾಟಿಂಗ್ ಬಂದಾಗ ಪಂದ್ಯದ ಗತಿಯೇ ಬದಲಾಯಿತು. ಕೊಹ್ಲಿ ಮತ್ತು ಯುವರಾಜ್ ಮೂರನೇ ವಿಕೇಟ್ ನಷ್ಟಕ್ಕೆ 46.2 ಓವರ್’ಗಳಲ್ಲಿ 285 ರನ್ ಕಲೆ ಹಾಕಿದರು. ಯುವರಾಜ್ ಸಿಂಗ್ ಔಟಾದಾಗ 49 ಎಸತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸ್’ರ್’ನೊಂದಿಗೆ 53 ರನ್ ಜಮೆಯಾಗಿತ್ತು.

ಕೊನೆಯ 10 ಎಸತಗಳಿದ್ದಾಗ ಕ್ರೀಸ್’ಗಿಳಿದ ಹರ್ದಿಕ್ ಪಾಂಡ್ಯ ಕೇವಲ 6 ಎಸತಗಳಲ್ಲಿ ಮೂರು ಹ್ಯಾಟ್ರಿಕ್ ಸಿಕ್ಸ್’ ಸಿಡಿಸುವುದರೊಂದಿಗೆ 20 ರನ್ ಬಾರಿಸಿದರು. ಭರ್ಜರಿ ಆಟವಾಡಿ ಅಜೇಯರಾಗಿ ಉಳಿದ ನಾಯಕ ವಿರಾಟ್ ಕೊಹ್ಲಿ ಕೂಡ 68 ಎಸತಗಳಲ್ಲಿ 6 ಬೌಂಡರಿ 3 ಸ್ಫೋಟಕ ಸಿಕ್ಸ್’ರ್ ಬಾರಿಸಿದ್ದರು. ಅಂತಿಮವಾಗಿ ಭಾರತ 48 ಓವರ್’ಗಳಲ್ಲಿ 3 ವಿಕೇಟ್ ನಷ್ಟಕ್ಕೆ 319 ರನ್’ಗಳ ಬೃಹತ್ ರನ್ ಗಳಿಸಿತು. ಬ್ಯಾಟಿಂಗ್ ಮಾಡಿದ ಐವರು ಬ್ಯಾಟ್ಸ್’ಮೆನ್’ಗಳಲ್ಲಿ ನಾಲ್ವರು ಅರ್ಧ ಶತಕ ದಾಖಲಿಸಿದ್ದು ಕೂಡ ದಾಖಲೆಯೆ. 32 ಎಸತಗಳಲ್ಲಿ 53 ರನ್’ಗಳಿಸಿದ ಯುವರಾಜ್ ಸಿಂಗ್ ಪಂದ್ಯ ಶ್ರೇಷ್ಟರಾದರು.


ಸ್ಕೋರ್ : 

ಭಾರತ 48 ಓವರ್’ಗಳಲ್ಲಿ 3 ವಿಕೇಟ್ ನಷ್ಟಕ್ಕೆ 319
(ರೋಹಿತ್: 91, ಧವನ್:68, ಕೊಹ್ಲಿ:81, ಯುವರಾಜ್:53, ಪಾಂಡ್ಯ:20)
ಪಾಕಿಸ್ತಾನ 33.4 ಓವರ್’ಗಳಲ್ಲಿ 9 ವಿಕೇಟ್ ನಷ್ಟಕ್ಕೆ 164(10ನೇ ಕ್ರಮಾಂಕದ ಆಟಗಾರ ಗಾಯಗೊಂಡು ನಿವೃತ್ತಿ)
ಪಂದ್ಯ ಶ್ರೇಷ್ಠ : ಯುವ’ರಾಜ್ ಸಿಂಗ್

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin