ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೈಬೀಸಿ ಕರೆಯುತ್ತಿವೆ ಕಲಾಕೃತಿಗಳು

ಈ ಸುದ್ದಿಯನ್ನು ಶೇರ್ ಮಾಡಿ

dasara
ಕರಕುಶಲಕರ್ಮಿಗಳು ಹಗಲು -ರಾತ್ರಿ ಕಷ್ಟಪಟ್ಟು ಕಲಾಕೃತಿಗಳನ್ನು ಸಿದ್ಧಪಡಿಸುತ್ತಾರೆ. ಆದರೆ ಅವರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ ಪರಿತಪಿಸುವಂತಾಗುತ್ತದೆ.ಇಂತಹ ಕಲಾವಿದರಿಗೆ ಪ್ರೊ ತ್ಸಾಹ ನೀಡಿ ಮಾರುಕಟ್ಟೆಯನ್ನು ಒದಗಿಸುವ ಕೆಲಸವನ್ನು ಸರ್ಕಾರಗಳು ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ತೆರೆ ಮರೆಯಲ್ಲಿರುವ ಕಲಾವಿದರಿಗೆ ಒಳಿತಾಗುತ್ತದೆ.ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯು ಕುಶಲಕರ್ಮಿಗಳಿಗೆ ನೇರ ಮಾರುಕಟ್ಟೆಯನ್ನು ಒದಗಿಸಲು ಪ್ರತಿ ವರ್ಷ ಸುಮಾರು 300 ಪ್ರದರ್ಶನ ಹಾಗೂ ಮಾರುಕಟ್ಟೆ ನೀಡುವ ಕಾರ್ಯವನ್ನು ನೀಡುತ್ತಿದೆ.
ಇದೀಗ ದಸರಾ ಸಂದರ್ಭವಾಗಿ ಇವುಗಳಲ್ಲಿ ಒಂದಾದ ಗಾಂಧಿ ಶಿಲ್ಪ ಬಜಾರ್ ಮೈಸೂರಿನಲ್ಲಿ ಆಯೋಜಿಸಲಾಗಿದೆ. ಅನೇಕ ಕಡೆಯಿಂದ ಬಂದ ಕುಶಲಕರ್ಮಿಗಳಿಗೆ, ಮೈಸೂರಿನ ಕಲಾ ಪ್ರೇಮಿಗಳ ಜೊತೆ ನೇರ ಮಾರುಕಟ್ಟೆ ವೇದಿಕೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಭಾಗವಹಿಸುವ ಕುಶಲಕರ್ಮಿಗಳು ಬಳಕೆದಾರರ ನಿಜವಾದ ಅಗತ್ಯತೆ ಮತ್ತು ಅಭಿರುಚಿಯನ್ನು ತಿಳಿದುಕೊಂಡು ಮಾರುಕಟ್ಟೆಗೆ ಬೇಕಾದ ನವೀನ ವಿನ್ಯಾಸದ ವಸ್ತುಗಳನ್ನು ರೂಪಿಸಿಕೊಳ್ಳಬಹುದಾಗಿದೆ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರು ಸೇರಿದಂತೆ ಸುಮಾರು 100 ಮಂದಿ ಕುಶಲಕರ್ಮಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಅವರು ತಮ್ಮ ಉತ್ಕಷ್ಟ  ಕಲಾವಸ್ತುಗಳನ್ನು ಐತಿಹಾಸಿಕ ಮೈಸೂರಿನ ಕಲಾಪ್ರೇಮಿಗಳಿಗೆ ಪ್ರದರ್ಶಿಸುತ್ತಿದ್ದಾರೆ.ಮೈಸೂರಿನ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಆಯೋಜಿಸಿರುವ ಈ ಗಾಂಧಿ ಶಿಲ್ಪ ಬಜಾರ್ ಸಾಂಸ್ಕೃತಿ ಕ ನಗರಿಯ ಜನರನ್ನಷ್ಟೇ ಅಲ್ಲ, ಪ್ರವಾಸಿಗರ ಗಮನವನ್ನೂ ಸೆಳೆಯುತ್ತಿದೆ. ಅ.9ರವರೆಗೆ ಪ್ರದರ್ಶನವಿರುತ್ತದೆ.
ಈ ಪ್ರದರ್ಶನ ಹಾಗೂ ಮಾರಾಟಕ್ಕಿರುವ ವಸ್ತುಗಳಲ್ಲಿ ಮುಖ್ಯವಾದವುಗಳೆಂದರೆ, ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಟೆರ್ರಾ ಕೋಟ, ರತ್ನ ಕಂಬಳಿ, ಹತ್ತಿ ಜಮಕಾನ, ಅನುಕರಣೆ ಆಭರಣಗಳು,ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕರಿ ಚಿತ್ರಕಲೆ, ಚರ್ಮದ ಅಕರ್ಷಕ ವಸ್ತುಗಳು, ತಂಜಾವೂರು, ಮೈಸೂರು ಶೈಲಿಯ ಚಿತ್ರಕಲೆ, ಕಲಾತ್ಮಕ ಚರ್ಮದ ಚಪ್ಪಲಿಗಳು, ಮುದ್ರಣಮಯ ಗೊಂಬೆಗಳು, ಕಛ್ ಪ್ರದೇಶದ ಕಸೂತಿ, ಛತ್ತೀಸ್‍ಗಢದ ದೋಕ್ರಾ ಎರಕದ ವಸ್ತುಗಳು, ಚಂದೇರಿ, ಪಟೋಲ ಸೀರೆಗಳು, ಪಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು, ಶೀತಲ ಪಟ್ಟಿ, ಬಿದಿರು-ಬೆತ್ತದ ವಸ್ತುಗಳು, ಪೂರ್ವೋತ್ತರದ ಅಲಂಕಾರಿಕ ಒಣ ಹೂಗಳು, ಚಿಕನ್ ಎಂಬ್ರಾಯಿಡರಿ, ಜಮಖಾನ, ಉತ್ತರ ಪ್ರದೇಶದ ಕಲಾತ್ಮಕ ಲೋಹದ ವಸ್ತುಗಳು, ಕಲಾತ್ಮಕ ಕಲ್ಲಿನ ವಸ್ತುಗಳು, ಮುದ್ರಿತ ಜವಳಿ, ಬಿಹಾರದ ಮಧುಬನಿ ಚಿತ್ರಕಲೆ, ಫೂಲಕಾರಿ, ಅರಗಿನ ಬಳೆಗಳು ಹಾಗೂ ಇನ್ನಿತರ ಕಲಾತ್ಮಕ ವಸ್ತುಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯ.
ಈ ಪ್ರದರ್ಶನದಲ್ಲಿ ಮದ್ಯವರ್ತಿಗಳಿಲ್ಲದೆ, ಕುಶಲಕರ್ಮಿಗಳಿಂದ ನೇರವಾಗಿ ಖರೀದಿದಾರರಿಗೆ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಪ್ರದರ್ಶನದಲ್ಲಿ ನೊಂದಾಯಿತ ಕುಶಲಕರ್ಮಿಗಳಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗಿದೆ.ಜೊತೆಗೆ ಪ್ರಯಾಣ ಭತ್ಯೆ ಹಾಗೂ ರವಾನೆ ಶುಲ್ಕವನ್ನು ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯಿಂದ ನೀಡಲಾಗುತ್ತದೆ. ಭಾರತದಾದ್ಯಂತ ತಯಾರಿಸಲ್ಪಟ್ಟ ವಿಭಿನ್ನ, ವೈಶಿಷ್ಟ್ಯಪೂರ್ಣವಾದ ಕರಕುಶಲ ಕಲೆಯನ್ನು ಒಂದೇ ಸೂರಿನಡಿಯಲ್ಲಿ ನೋಡಿ ಖರೀದಿಸಲು ಮೈಸೂರಿನ ಕಲಾಪ್ರೇಮಿಗಳಿಗೆ ಒಂದು ಸುವರ್ಣವಕಾಶ ಸಿಕ್ಕಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin