ಸಾಕ್ಷರತೆಯ ಸಾಕ್ಷ್ಯಾತ್ಕಾರವೇ ಪ್ರಗತಿಯ ಸಂಕೇತ

ಈ ಸುದ್ದಿಯನ್ನು ಶೇರ್ ಮಾಡಿ

cm--siddu

ನಂಜನಗೂಡು, ಆ.30-ಯಾವ ದೇಶ ಸಾಕ್ಷರತೆಯಲ್ಲಿ ಶೇ. 100ರಷ್ಟು ಮುಟ್ಟಿದೆಯೋ ಆ ದೇಶ ಪ್ರಗತಿ ಹೊಂದಿರುವ ದೇಶ ಎಂಬುದನ್ನು ಸೂಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವತಂತ್ರ ಪೂರ್ವದಲ್ಲಿ ಶೇಖಡ 14ರಷ್ಟು ಮಾತ್ರ ಸಾಕ್ಷರತೆಯಿದ್ದು ಬಹುಸಂಖ್ಯಾತ ವರ್ಗದವರು ಅಕ್ಷರ ಸಂಸ್ಕೃತಿ ಯಿಂದ ವಂಚಿತರಾಗಿದ್ದರು ಎಂದರು.  ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಸರ್ವರಿಗೂ ವಿದ್ಯಾಭ್ಯಾಸ ಸಿಗುವ ದೃಷ್ಟಿಯಿಂದ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು.ನಾಲ್ಕು ದಶಕಗಳ ಹಿಂದೆ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಶಿಕ್ಷಣ ಕ್ಷೇತ್ರಗಳನ್ನು ತೆರೆದು ವಿದ್ಯಾಭ್ಯಾಸ ನೀಡದಿದ್ದರೆ ಇಂದು ನಮ್ಮ ರಾಜ್ಯ ಶೇ.80ರಷ್ಟು ಸಾಕ್ಷರತೆಯನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ, ಸರ್ಕಾರ ಮಾಡದ ಇಂತಹ ಉತ್ತಮ ಕಾರ್ಯಗಳನ್ನು ರಾಜೇಂದ್ರ ಮಹಾಸ್ವಾಮಿಗಳು ಮಾಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಜ್ಞಾನಾರ್ಜನೆಯ ಜೊತೆಗೆ ವಿಕಸನ ಹೊಂದುವಂತೆ ಮಾಡಿದವರು ರಾಜೇಂದ್ರ ಶ್ರೀಗಳು ಆದ್ದರಿಂದ ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ ಎಂದರು.

ಸಚಿವರಾದ ಎಂ.ಬಿ.ಪಾಟೀಲ್, ರುದ್ರಪ್ಪ ಮಾನಪ್ಪ ಲಮಾಣಿ, ತನ್ವೀರ್ ಸೇಠ್, ಹೆಚ್.ಎಸ್.ಮಹದೇವಪ್ರಸಾದ್, ಶಾಸಕರುಗಳಾದ ವಿಜಯ್‍ಕುಮಾರ್, ಸೋಮಶೇಖರ್, ಮರಿತಿಬ್ಬೇಗೌಡ, ಜಯಣ್ಣ, ಧರ್ಮಸೇನ, ಪುಟ್ಟರಂಗಶೆಟ್ಟಿ, ರಾಜ್ಯಸಭಾ ಸದಸ್ಯ ಡಾ||ಪ್ರಭಾಕರ್ ಬಿ.ಕೋರೆ, ಮತ್ತು ಹಲವಾರು ಪ್ರಮುಖರು ಭಾಗವಹಿಸಿದ್ದರು. ದಿವ್ಯ ಸಾನಿಧ್ಯವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ವಿಜಯಪುರದ ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಮಹಾಸ್ವಾಮಿಗಳು ಪ್ರವಚನ ನೀಡಿದರು.

 

► Follow us on –  Facebook / Twitter  / Google+

Facebook Comments

Sri Raghav

Admin