ಸಾಕ್ಷಿ ಮಲಿಕ್ ಅವರ ಕೊರಳಲ್ಲಿ ಪದಕ ಇದೆ. ಶೋಭಾ ಡೇ ಬಳಿ ಏನಿದೆ..? : ವೀರೂ

ಈ ಸುದ್ದಿಯನ್ನು ಶೇರ್ ಮಾಡಿ

Sehwag

ಮುಂಬೈ, ಆ.19- ಭಾರತೀಯ ಕ್ರೀಡಾಪಟುಗಳು ಒಲಂಪಿಕ್ ಕ್ರೀಡಾಕೂಟದಲ್ಲಿ ಸೆಲ್ಫೀ ತೆಗೆಯಲು ಹೋಗಿದ್ದಾರೆ. ಅವರನ್ನು ರಿಯೋಗೆ ಕಳುಹಿಸಿರುವುದು ರಾಷ್ಟ್ರೀಯ ವ್ಯರ್ಥ ಎಂದು ಹೇಳಿ ಟೀಕೆಗಳಿಗೆ ಗುರಿಯಾಗಿದ್ದ ಖ್ಯಾತ ಅಂಕಣಕಾರ್ತಿ ಮತ್ತು ಲೇಖಕಿ ಶೋಭಾ ಡೇ ಅವರ ಮೇಲೆ ಮಾಜಿ ಕ್ರಿಕೆಟ್ ಪಟು ವೀರೇಂದ್ರ ಸೆಹ್ವಾಗ್ ವ್ಯಂಗ್ಯಸ್ತ್ರಗಳನ್ನು ಪ್ರಯೋಗಿಸಿದ್ದಾರೆ. ರಿಯೋ ಒಲಂಪಿಕ್ ಕುಸ್ತಿ ವಿಭಾಗದಲ್ಲಿ ಕಂಚು ಪದಕ ಗೆದ್ದ ನಂತರ ಅನೇಕರು ಶೋಭಾ ಡೇ ಹೇಳಿಕೆಗೆ ತಿರುಗೇಟು ನೀಡುತ್ತಿದ್ದಾರೆ. ಇದೇ ಅವಕಾಶ ಬಳಸಿಕೊಂಡ ವೀರೂ ಗಾಯದ ಮೇಲೆ ಉಪ್ಪು ಸವರುವಂತೆ ಶೋಭಾರನ್ನು ತಮ್ಮದೇ ಹಾಸ್ಯ ಶೈಲಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.  ಸಾಕ್ಷಿ ಮಲಿಕ್ ಅವರ ಕೊರಳಲ್ಲಿ ಪದಕ ಇದೆ. ಶೋಭಾ ಡೇ ಬಳಿ ಏನಿದೆ ಎಂದು ವ್ಯಂಗ್ಯವಾಡಿದ್ದಾರೆ. ಸಾಕ್ಷಿ ಅವರ ಸಾಧನೆಯನ್ನು ಶೋಭಾ ಬಿಲ್ಕುಲ್ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಅವರು ಇನ್ನು ಮುಂದೆ ಇಂಥ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ಮಾಡಿ ರಕ್ಷಾ ಬಂಧನ್ ಶುಭಾಶಯ ಕೋರಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.