ಸಾಕ್ಷಿ ಮಲ್ಲಿಕ್‌ ಗೆ ಕೂಡಿ ಬಂತು ಕಂಕಣ ಭಾಗ್ಯ, ಹುಡುಗ ಯಾರು ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

Sakshi

ನವದೆಹಲಿ, ಆ. 28- ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗೆದ್ದು ಕೊಟ್ಟ ಸಾಕ್ಷಿ ಮಲ್ಲಿಕ್‌ಗೆ ಈ ವರ್ಷವೇ ಕಂಕಣಭಾಗ್ಯ ಕೂಡಿ ಬಂದಿದೆ.
ಈ ವಿಷಯವನ್ನು ಸ್ವತಹ ಸಾಕ್ಷಿ ಮಲ್ಲಿಕ್ ಅವರೇ ಸುದ್ದಿಗಾರರಿಗೆ ತಿಳಿಸಿದ್ದು ನಾನು ಈ ವರ್ಷವೇ ಮದುವೆಯಾಗಲಿದ್ದೇನೆ , ಆದರೆ ನಾನು ವರಿಸಲಿರುವ ವರನ ಬಗ್ಗೆ ಮಾತ್ರ ತಿಳಿಸುವುದಿಲ್ಲವಾದರೂ ಅವರೂ ಕೂಡ ನನ್ನ ಹಾಗೆಯೇ  ಆಗಿದ್ದಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.  ಮದುವೆಯ ನಂತರವೂ ನಾನು ಕುಸ್ತಿ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವುದಾಗಿಯೂ ತಿಳಿಸಿದರು. ಇತ್ತೀಚೆಗೆ ರಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಹರಿಯಾಣದ ಸಾಕ್ಷಿ ಮಲ್ಲಿಕ್ ಅವರು 58 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಐಸೂಲು ಟೈನ್‌ಬಿಕಾವೋ ಅವರನ್ನು 8-5 ರಿಂದ ಸೋಲಿಸುವ ಮೂಲಕ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಇಂತಹ ಸಾಧನೆ ಮಾಡಿದ ಮೊದಲ ಭಾರತೀಯಳು ಎಂಬ ಖ್ಯಾತಿಗೆ ಮಲ್ಲಿಕ್ ಸಾಕ್ಷಿಯಾದರು.

► Follow us on –  Facebook / Twitter  / Google+

 

Facebook Comments

Sri Raghav

Admin