ಸಾಗುವ ದಾರಿಯಲ್ಲಿ ಟ್ರೈಲರ್ ಬಿಡುಗಡೆ ಸಮಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

sagavali4
ಹೊಸಬರ ಕೈಲಿ ಅರಳಿದ ಚಿತ್ರ ಸಾಗುವ ದಾರಿಯಲ್ಲಿ ಟ್ರೈಲರ್ ಬಿಡುಗಡೆ ಸಮಾರಂಭ ಕಳೆದವಾರ ರೇಣುಕಾಂಬ ಥಿಯೇಟರಿನಲ್ಲಿ ನೆರವೇರಿತು. ಕಿಚ್ಚ ಸುದೀಪ್ ಈ ಚಿತ್ರದ ಟ್ರೈಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಶಿವಕುಮಾರ್ ಗೌಡ ಅವರ ನಿರ್ದೇಶನ ಹಾಗೂ ಶಿವಶಂಕರ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಛೇಂಬರ್ ಅಧ್ಯಕ್ಷರಾದ ಸಾ.ರಾ.ಗೋವಿಂದು ಅವರ ಪುತ್ರ ಅನೂಪ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.ಪವಿತ್ರಾ ಗೌಡ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಈ ಟೈಟಲ್ ಕೇಳಿದಾಗ ನನ್ನ ಜೀವನದ ದಾರಿಯೂ ನೆನಪಾಗುತ್ತದೆ. ಪ್ರಾರಂಭದಲ್ಲಿ ನನ್ನ ಸಿನಿಮಾ ಸ್ಪರ್ಶವನ್ನು ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಶಿವಣ್ಣ ಅವರಿಗೆಲ್ಲ ತೋರಿಸಲು ಇದೇ ಸ್ಟುಡಿಯೋದಲ್ಲಿ ಕಾದು ಕುಳಿತಿದ್ದು ಈಗಲೂ ನನಗೆ ನೆನಪಿದೆ. ಅನೂಪ್ ಮಾಮ ಅಂತ ಕರೆದಿದ್ದು ಖುಷಿ ತಂದಿದೆ.saguvali

ಹೊಸಬರ ಸಿನಿಮಾಗಳು ಗೆಲ್ಲಬೇಕು. ಅನೂಪ್ ಉತ್ತಮ ಕಲಾವಿದ, ಆತನಿಗೆ ಮುಂದೆ ಉತ್ತಮ ಭವಿಷ್ಯವಿದೆ, ಅಲ್ಲದೆ, ಸಾ.ರಾ.ಗೋವಿಂದು ಅವರು ಕನ್ನಡದ ಪರ ಕೆಲಸ ಮಾಡುತ್ತಿದ್ದಾರೆ. ಕಷ್ಟ ಎನ್ನುವುದು ಎಲ್ಲರಿಗೂ ಬರುತ್ತದೆ. ಅದನ್ನು ಎದುರಿಸಿ ಮುನ್ನಡೆಯಬೇಕು. ಈ ಚಿತ್ರದ ಸನ್ನಿವೇಶಗಳು ಭಾವನಾತ್ಮಕವಾಗಿದೆ. ತುಂಬಾ ಮುಗ್ದತೆಯಿಂದ ಈ ತಂಡವು ಕೆಲಸ ಮಾಡಿದೆ ಎಂದು ಹೇಳಿದರು.ನಂತರ ಮಾತನಾಡಿದ ಸಾ.ರಾ. ಗೋವಿಂದು ಅವರು ನಿರ್ಮಾಪಕರ ಪಾಲಿಗೆ ನಟ ಸುದೀಪ್ ನಿಜವಾದ ಹೀರೋ ಆಗಿದ್ದಾರೆ, ಅವರು ಸಂಭಾವನೆ ತೆಗೆದುಕೊಳ್ಳದೆ ಒಂದು ಚಿತ್ರದಲ್ಲಿ ಅಭಿನಯಿಸಿ ಎಲ್ಲಾ ಜವಾಬ್ದಾರಿಯನ್ನು ಹೊತ್ತುಕೊಂಡರು.sagavali2

ಇಂತಹ ಗುಣಗಳು ಹಲವರಲ್ಲಿ ಇನ್ನೂ ಬಂದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಚೇಂಬರ್‍ನ ಮಾಜಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಮಾತನಾಡುತ್ತ ಶಿವಕುಮಾರ ಸ್ವಾಮೀಜಿ ಅವರ ಹುಟ್ಟಹಬ್ಬದಂದು ಈ ಟ್ರೈಲರ್ ಲಾಂಚ್ ಆಗಿರುವುದು ಚಿತ್ರಕ್ಕೆ ಒಳ್ಳೆಯದೇ ಆಗುತ್ತದೆ. ಬೆಳೆಯುವ ಕಲಾವಿದರಿಗೆ ಬೆಳೆದಿರುವ ಕಲಾವಿದರು ಪ್ರೋತ್ಸಾಹ ನೀಡುವುದು ಆರೋಗ್ಯದಾಯಕ ಬೆಳವಣಿಗೆಯಾಗಿದೆ. ಅಂತಹ ಕೆಲಸವನ್ನು ನಟ ಸುದೀಪ್ ಅವರು ಮಾಡುತ್ತಿದ್ದಾರೆ
ಎಂದು ಅವರ ಕಾರ್ಯವನ್ನು ಮೆಚ್ಚಿಕೊಂಡರು. ನಿಜ ಜೀವನದಲ್ಲಿ ನಡೆದಂಥ ಹಲವಾರು ಸತ್ಯಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರಕಥೆಯನ್ನು ಮಾಡಲಾಗಿದೆ. ನಮೋ ವೆಂಕಟೇಶ ಹಾಡು ತುಂಬಾ ಪಾಪುಲರ್ ಆಗಿದೆ ಎಂದು ಚಿತ್ರದ ನಿರ್ದೇಶಕ ಶಿವಕುಮಾರ್‍ಗೌಡ ಅವರು ಹೇಳಿಕೊಂಡರು.
ಇದು ಕಾದಂಬರಿಯೊಂದರ ಆಧಾರಿತ ಕಥೆ ಹೊಂದಿದ ಸಿನಿಮಾ ಆಗಿರುವುದು ನನ್ನ ಸಿನಿಮಾ ಕೆರಿಯರ್‍ಗೆ ಉತ್ತಮ ಅವಕಾಶವೆಂದು ಭಾವಿಸುತ್ತೆನೆ ಎಂದು ಚಿತ್ರದ ನಾಯಕನಟ ಅನೂಪ್ ಸಾ.ರಾ. ಗೋವಿಂದು ಹೇಳಿಕೊಂಡರು. ಹಿರಿಯ ನಟ ದೇವರಾಜ್ ಈ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ರಾಮಚಂದ್ರ ಗುರೂಜಿ ಸೇರಿದಂತೆ ಹಲವಾರು ಚಿತ್ರೋದ್ಯಮ ಗಣ್ಯರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin