ಸಾಧನೆಗಳ ಪೂರ್ಣ ವರದಿಯನ್ನು ನೀಡುವಂತೆ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Modi

ನವದೆಹಲಿ,ಜೂ.19-ಒಂದೆಡೆ ರಾಷ್ಟ್ರಪತಿ ಚುನಾವಣೆ, ಮತ್ತೊಂದೆಡೆ ಸಚಿವ ಸಂಪುಟ ಪುನಾರಚನೆ ನಡುವೆಯೇ ಎಲ್ಲ ಸಚಿವರು ತಮ್ಮ ತಮ್ಮ ಇಲಾಖೆಯಲ್ಲಿ ಮಾಡಿರುವ ಸಾಧನೆಗಳ ಪೂರ್ಣ ವರದಿಯನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಹೊದ್ಯೋಗಿಗಳಿಗೆ ಸೂಚಿಸಿದ್ದಾರೆ. ಅಮೆರಿಕ ಪ್ರವಾಸದ ನಂತರ ಸ್ವದೇಶಕ್ಕೆ ಹಿಂತಿರುಗಲಿರುವ ಮೋದಿ ಅವರು ಮೂರು ವರ್ಷಗಳ ಅವಧಿಯಲ್ಲಿ ಸಚಿವರ ಸಾಧನೆಗಳನ್ನು ಪರಾಮರ್ಶೆ ಮಾಡಲಿದ್ದಾರೆ.
ಈಗಾಗಲೇ ಎಲ್ಲ ಸಚಿವರಿಗೆ ಇಲಾಖೆಯ ಸಾಧನೆ ವಿವರಗಳನ್ನು ಸಿದ್ಧ್ದಪಡಿಸಿಕೊಳ್ಳಬೇಕು, ಪ್ರಮುಖವಾಗಿ ನಿಮ್ಮ ನಿಮ್ಮ ಇಲಾಖೆಯಲ್ಲಿ ಸರ್ಕಾರದ ಯಾವ ಯಾವ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೀರಿ, ಇವುಗಳು ಎಷ್ಟರ ಮಟ್ಟಿಗೆ ಫಲಾನುಭವಿಗಳನ್ನು ತಲುಪಿವೆ ಎಂಬುದು ಸೇರಿದಂತೆ ಮತ್ತಿತರ ಮಾಹಿತಿಯನ್ನು ಪಡೆಯಲಿದ್ದಾರೆ.

ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ, ಸಂಸದರ ಆದರ್ಶ ಗ್ರಾಮ ಯೋಜನೆ, ಜನ್‍ಧನ್, ಉಜ್ವಲ ಸೇರಿದಂತೆ ಎನ್‍ಡಿಎ ಸರ್ಕಾರದ ರೀತಿ ನಿರೂಪಣೆಗಳು, ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ತಲುಪಿಸುತ್ತಿರುವ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಕಳೆದ ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರಧಾನಿ ಎಲ್ಲ ಸಚಿವರಿಗೂ ವರದಿ ಸಿದ್ದಪಡಿಸಲು ಸೂಚನೆ ನೀಡಿದ್ದರೆಂದು ಉನ್ನತ ಮೂಲಗಳು ತಿಳಿಸಿವೆ. 24ರಂದು ಅಮೆರಿಕ ಪ್ರವಾಸ ಕೈಗೊಂಡು ಬಳಿಕ ಭಾರತಕ್ಕೆ ಬಂದ ನಂತರ ಸಚಿವರ ಸಾಧನೆಯ ಪರಾಮರ್ಶೆ ನಡೆಯಲಿದೆ.

ಸಂಪುಟ ಪುನಾರಚನೆ:

ಮೂಲಗಳ ಪ್ರಕಾರ ಪ್ರಧಾನಿ ಈ ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್, ಹಿಮಾಚಲಪ್ರದೇಶ, 2018ರ ಮಾರ್ಚ್, ಏಪ್ರಿಲ್‍ನಲ್ಲಿ ನಡೆಯಲಿರುವ ಕರ್ನಾಟಕ ಹಾಗೂ ಡಿಸೆಂಬರ್‍ನಲ್ಲಿ ಜರುಗಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸಂಪುಟ ಪುನಾರಚನೆಗೆ ಕೈ ಹಾಕಿದ್ದಾರೆ.  ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದವರಿಗೆ ಪಕ್ಷದ ಜವಾಬ್ದಾರಿ ನೀಡುವುದು ಹಾಗೂ ಇನ್ನು ಕೆಲವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.  ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆ ಪ್ರಧಾನಿ ಸಮತೋಲನದ ಸಂಪುಟ ಪುನರಾಚನೆ ಮಾಡುವ ಸಂಭವವಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin