ಸಾಧ್ವಿ ಪ್ರಾಚಿಗೆ ಐಎಸ್ಐನಿಂದ ಜೀವ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Prachi

ನವದೆಹಲಿ, ಆ.27- ವಿಶ್ವ ಹಿಂದು ಪರಿಷತ್ (VHP) ನಾಯಕಿ ಸಾಧ್ವಿಪ್ರಾಚಿ ಅವರಿಗೆ ಐಎಸ್ಐ ಭಯೋತ್ಪಾದ ಸಂಘಟನೆಯಿಂದ ಜೀವ ಬೆದರಿಕೆ ಕರೆ ಬಂದಿದೆ. ರಾಮಮಂದಿರ ಕುರಿತು ಮಾತನಾಡುವುದನ್ನು ನಿಲ್ಲಿಸದಿದ್ದರೆ ಕೊಲ್ಲುವುದಾಗಿ ಐಎಸ್ಐ ಫೋನ್ ಮೂಲಕ ತಮಗೆ ಪ್ರಾಣ ಬೆದರಿಕೆ ಹಾಕಿರುವುದಾಗಿ ಸಾಧ್ವಿಪ್ರಾಚಿ ಹೇಳಿದ್ದಾರೆ.  ಈ ಹಿಂದೆಯೂ ಇಂಥ ಬೆದರಿಕೆ ಕರೆಗಳು ತಮಗೆ ಬಂದಿದ್ದು, ದೂರುಗಳನ್ನು ನೀಡಿದ್ದರೂ ಉತ್ತರ ಪ್ರದೇಶ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.  ಗುರುವಾರ ರಾತ್ರಿ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐನ ಸದಸ್ಯ ಎಂದು ನನ್ನನ್ನು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ತಮಗೆ ಪ್ರಾಣ ಬೆದರಿಕೆಯೊಡ್ಡಿದ್ದ.

ಬದುಕು ಅಥವಾ ಸಾವು ಇವೆರಡರಲ್ಲಿ ಯಾವುದನ್ನು ನೀವು ಇಷ್ಟಪಡುತ್ತೀರಾ ಎಂದು ಆತ ಪ್ರಶ್ನಿಸಿದ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ ಎಂದು ಹೇಳಿದೆ. ಆಗ ಹಾಗಾದರೆ ಸಾಯಲು ನೀವು ಸಿದ್ಧರಾಗಿ ಎಂದು ಬೆದರಿಕೆ ಹಾಕಿದ ಎಂದು ಸಾಧ್ವಿ ಹೇಳಿದ್ದಾರೆ.  ನೀವು ರಾಮನ ದೇವಸ್ಥಾನದ ಬಗ್ಗೆ ಚಕಾರ ಎತ್ತುವುದನ್ನು ನಿಲ್ಲಿಸದಿದ್ದರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಆತ ಪ್ರಾಣಬೆದರಿಕೆ ಹಾಕಿದ್ದಾನೆ ಎಂದು ಅವರು ತಿಳಿಸಿದ್ದಾರೆ.  ಇಂಥ ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನಾನು ಎಲ್ಲೇ ಇರಲಿ ರಾಮಮಂದಿರ ದೇವಸ್ಥಾನದ ಬಗ್ಗೆ ಮಾತನಾಡುತ್ತೇನೆ ಎಂದು ಸಾಧ್ವಿ ಪ್ರಾಚಿ ಪುನರುಚ್ಚರಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin