ಸಾನಿಯಾ-ಬೊಪಣ್ಣ ಜೋಡಿ ಕ್ವಾರ್ಟರ್ ಫೈನಲ್‍ಗೆ

ಈ ಸುದ್ದಿಯನ್ನು ಶೇರ್ ಮಾಡಿ

Saniaya-a

ರಿಯೋ-ಡಿ.ಜನೈರೋ,ಆ.12-ರಿಯೋ ಒಲಿಂಪಿಕ್ಸ್‍ನ ಮಿಶ್ರ ಡಬಲ್ಸ್ ಟೆನಿಸ್ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಪದಕ ಗೆಲುವಿನ ಆಸೆಯನ್ನು ಚಿಗುರಿಸಿದ್ದಾರೆ.   ಇಲ್ಲಿ ನಡೆದ ಪಂದ್ಯದಲ್ಲಿ ಭಾರತದ ಈ ಜೋಡಿಯು ಆಸ್ಟ್ರೇಲಿಯಾದ ಸಮಂತಾ ಸ್ಟೋಸರ್ ಮತ್ತು ಜಾನ್‍ಪೀರ್ಸ್ ಅವರನ್ನು ನೇರ ಸೆಟ್‍ಗಳಿಂದ ಮಣಿಸಿ 8ರ ಘಟ್ಟ ಪ್ರವೇಶಿಸಿದರು.  ತಮ್ಮ ಆರಂಭಿಕ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದ ಭಾರತೀಯ ಜೋಡಿ ಆಕ್ರಮಣಕಾರಿ ಆಟ ಪ್ರದರ್ಶಿಸಲು ಕೆಲವು ಹೊತ್ತು ಪರಿಶ್ರಮ ಪಡಬೇಕಾಯಿತು. ನಂತರ ಲಯ ಕಾಯ್ದುಕೊಂಡ ಸಾನಿಯಾ-ಬೋಪಣ್ಣ, 73 ನಿಮಿಷಗಳ ಪಂದ್ಯದಲ್ಲಿ ಆಸ್ಟ್ರೇಲಿಯಾ ಜೋಡಿಯನ್ನು 7-5, 6-4 ನೇರ ಸೆಟ್‍ಗಳಿಂದ ಪರಾಭವಗೊಳಿಸಿದರು.
ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾನಿಯಾ, ಆರಂಭದ ಗೆಲುವು ಸಂತಸ ನೀಡಿದೆ. ಮುಂದಿನ ಸುತ್ತಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡಿದರು.

 

Facebook Comments

Sri Raghav

Admin