ಸಾನಿಯಾ-ಬೋಪಣ್ಣ ಸೆಮಿಫೈನಲ್ ಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

NRDI-011

ರಿಯೋಡಿಜನೈರೋ, ಆ.13- ರಿಯೋ ಒಲಿಂಪಿಕ್ಸ್ ಟೆನಿಸ್‍ನಲ್ಲಿ ಭಾರತದ ಪದಕ ಗೆಲ್ಲುವ ಏಕೈಕ ಸ್ಪರ್ಧೆಯಾಗುಳಿದಿರುವ ಮಿಶ್ರ ಡಬ್ಬಲ್‍ನಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತಕ್ಕೆ ಪದಕವೊಂದು ಲಭಿಸುವುದು ದೃಢಪಟ್ಟಿದೆ.  ಶುಕ್ರವಾರ ರಾತ್ರಿ ಇಲ್ಲಿ ನಡೆದ ಏಳನೇ ದಿನದ ಕ್ರೀಡಾಕೂಟದಲ್ಲಿ ಈ ಜೋಡಿ, ಬ್ರಿಟನ್‍ನ ಆ್ಯಂಡಿ ಮರ್ರೆ ಮತ್ತು ಹೀಥರ್ ವ್ಯಾಟ್ಸನ್ ಅವರನ್ನು 6-4, 6-4ಗಳಿಂದ ಮಣಿಸಿ ಸೆಮಿಫೈನಲ್ ತಲುಪಿದ್ದು, ಭಾರತದ ಪದಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ.  ಸಾನಿಯಾ-ಬೊಪಣ್ಣ ಜೋಡಿ ಇನ್ನೊಂದು ಗೆಲುವು ಸಾಧಿಸಿದರೆ ರಜತ ಪದಕ ಗೆಲ್ಲುವ ಅವಕಾಶವಿದ್ದು, ಸೆಮಿಫೈನಲ್‍ನಲ್ಲಿ ಸೋತರೂ ಕಂಚುಪದಕ ಕಟ್ಟಿಟ್ಟ ಬುತ್ತಿಯಾಗಿದೆ.

ಒಲಿಂಪಿಕ್ ಟೆನಿಸ್ ಸೆಂಟರ್‍ನಲ್ಲಿ ನಡೆದ ಪಂದ್ಯದಲ್ಲಿ ಈ ಜೋಡಿ ಬ್ರಿಟನ್‍ನ ಮರ್ರೆ ಮತ್ತು ಹೀಥರ್ ಅವರನ್ನು 67 ನಿಮಿಷಗಳ ಹೋರಾಟದಲ್ಲಿ ಪರಾಭವಗೊಳಿಸಿತು.   ಆರನೇ ದಿನದ ಪಂದ್ಯದಲ್ಲಿ ಭಾರತದ ಈ ಜೋಡಿ ಆಸ್ಟ್ರೇಲಿಯಾದ ಸಮಂತಾ ಸ್ಪೋಸರ್ ಮತ್ತು ಜೋನಾಥನ್ ಪೀಯರ್ಸ್ ಜೋಡಿಯನ್ನು 7-5, 6-4ರಿಂದ ಸೋಲಿಸಿ ಸೆಮಿಫೈನಲ್ ತಲುಪಿತ್ತು.
ಸಾನಿಯಾ-ಬೋಪಣ್ಣ ಇಂದು ರಾತ್ರಿ ರಿಯೋದಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್ ಮತ್ತು ರಾಜೀವ್ ರಾಮ್ ಜೊಡಿಯನ್ನು ಸೆಮಿಫೈನಲ್ಸ್‍ನಲ್ಲಿ  ಎದುರಿಸಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin