ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮುನ್ನ ಒಮ್ಮೆ ಯೋಚಿಸಿ..!

ಈ ಸುದ್ದಿಯನ್ನು ಶೇರ್ ಮಾಡಿ

agsghfh

ಬೆಂಗಳೂರು,ಆ.5– ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕುವವರನ್ನು ಪತ್ತೆಹಚ್ಚಲು ಸೈಬರ್ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದಾರೆ.  ಇತ್ತೀಚೆಗೆ ಸಿಎಂ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಅವರು ಬೆಲ್ಜಿಯಂನಲ್ಲಿ ಮೃತಪಟ್ಟ ಸಂದರ್ಭದಲ್ಲಿ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಇಂತಹ ಸುಮಾರು ಒಂದು ಸಾವಿರ ಪೋಸ್ಟ್ಗಳನ್ನು ಗುರುತಿಸಲಾಗಿದ್ದು, ಅದರ ಮೂಲದ ತನಿಖೆಯನ್ನು ಆರಂಭಿಸ ಲಾಗಿದೆ.   ಕೆಲವರು ನಕಲಿ ಖಾತೆ ತೆರೆದು ಅವಹೇಳನ ಕಾರಿ ಪೋಸ್ಟ್ ಮಾಡಿ ನಂತರ ಖಾತೆಯನ್ನು ಡಿಲೀಟ್ ಮಾಡುವ ಮೂಲಕ ನೇಪಥ್ಯಕ್ಕೆ ಸರಿದಿದ್ದಾರೆ.  ನಕಲಿ ಖಾತೆಯಿಂದ ಹೊರಹೊಮ್ಮಿದ ಪೋಸ್ಟ್ಗಳನ್ನು ಬಹಳಷ್ಟು ಮಂದಿ ಶೇರ್ ಮಾಡಿ ಕಮೆಂಟ್ಗಳನ್ನು ಹಾಕಿ, ಇದು ಒಬ್ಬರಿಂದ ಮತ್ತೊಬ್ಬರಿಗೆ ವ್ಯಾಪಕವಾಗಿ ಹರಡಿ ಅಪಪ್ರಚಾರ ಮಾಡಲಾಗಿದೆ.

ಈ ಸಂಬಂಧಪಟ್ಟಂತೆ ದಾಖಲೆ ಸಂಗ್ರಹಿ ಒಸಿರುವ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿರುವ ಮೂಲವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಯಾವ ಕಂಪ್ಯೂಟರ್ನಿಂದ ಮೊದಲ ಪೋಸ್ಟ್ ಆಗಿದೆ ಎಂಬ ಮಾಹಿತಿ ಆಧರಿಸಿ ತನಿಖೆ ನಡೆಸಲಾಗುತ್ತಿದೆ.  ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದ ಮೇಲೆ ಕರಾವಳಿ, ಕೊಡಗು ಜಿಲ್ಲೆಗಳಿಂದ ಈ ರೀತಿಯ ಅವಹೇಳನಕಾರಿ ಮಾಹಿತಿಗಳು ಹೊರಬಿದ್ದಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ.

ನಕಲಿ ಕಂಪನಿಯ ಶಂಕೆ:

ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಲು ಕೆಲ ಖಾಸಗಿ ಕಂಪನಿಗಳು ಗುತ್ತಿಗೆ ಪಡೆದಿರುವ ಅನುಮಾನಗಳು ದಟ್ಟವಾಗಿವೆ. ದೆಹಲಿಯಲ್ಲಿ ಇಂತಹ ಕಂಪನಿಗಳು ವ್ಯಾಪಕವಾಗಿ ಕೆಲಸ ಮಾಡುತ್ತಿದ್ದು ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಅಪಪ್ರಚಾರ ಮಾಡಲು ಕೆಲ ಐಟಿ ಕಂಪನಿಗಳು ಸುಫಾರಿ ಪಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಇಂತಹ ಕಂಪನಿಗಳ ಮೂಲವನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಈ ಹಿಂದೆ ಡಿ.ಕೆ.ರವಿ ಪ್ರಕರಣದಲ್ಲಿ ಮರಳು ಗಣಿಗಾರಿಕೆ, ಡಿವೈಎಸ್ಪಿ  ಗಣಪತಿ ಅವರ ಬಗ್ಗೆ ಒಂದಂಕಿ ಲಾಟರಿ, ಸಿಎಂ ಸಿದ್ದರಾಮಯ್ಯನವರ ವಾಚ್ ಹಗರಣ ಮತ್ತಿತರ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಅನುಮಾನ ಮೂಡುವ ಮಾಹಿತಿಗಳನ್ನು ಜಾಲತಾಣಗಳಲ್ಲಿ ಹರಿಬಿಡಲಾಯಿತು.   ತಲೆಬುಡವಿಲ್ಲದ ಇಂತಹ ವಿಷಯಗಳು ಸಾಮಾಜಿಕವಾಗಿ ಹೆಚ್ಚು ಚರ್ಚೆಗೆ ಗ್ರಾಸವಾಗಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯುಂಟು ಮಾಡಿದೆ. ಇತ್ತೀಚೆಗೆ ರಾಕೇಶ್ ಸಾವಿನ ಪ್ರಕರಣದಲ್ಲಿ ವೈಯಕ್ತಿಕ ನಿಂದನೆ ಪ್ರಕರಣಗಳು ಕಂಡುಬಂದಿವೆ.  ಈ ರೀತಿ ಒಂದು ಸಾವಿರ ಪೋಸ್ಟ್ಗಳನ್ನು ಪೊಲೀಸರು ಕಲೆ ಹಾಕಿದ್ದು, ಕೆಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಇಂತಹ ಅಪ್ರಪಚಾರ  ತಡೆಗಟ್ಟುವ ನಿಟ್ಟಿನಲ್ಲಿ ಶತಾಯಗತಾಯ ಕ್ರಮ ಕೈಗೊಳ್ಳುವುದಾಗಿ ಸೈಬರ್ ಪೊಲೀಸರು ಮುಂದಾಗಿದ್ದಾರೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin