ಸಾಮಾಜಿಕ ಸುಧಾರಣೆಯ ಹರಿಕಾರ ದೇವರಾಜು ಅರಸು

ಈ ಸುದ್ದಿಯನ್ನು ಶೇರ್ ಮಾಡಿ

t--narasipura

ತಿ.ನರಸೀಪುರ, ಆ.15– ಸಾಮಾಜಿಕ ಸುಧಾರಣೆಯ ಹರಿಕಾರ ಡಿ.ದೇವರಾಜು ಅರಸುರವರ ರಥವನ್ನು ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕಿನ ಕೆಂಪಯ್ಯನಹುಂಡಿ ಗ್ರಾಮದ ಬಳಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ತಾ.ಪಂ ಅಧ್ಯಕ್ಷ ಸಿ.ಚಾಮೇಗೌಡ, ಅರಸುರವರು ವೃದ್ದರು ತಮ್ಮ ಸಂಧ್ಯಾಕಾಲದಲ್ಲಿ ನೆಮ್ಮದಿಯಿಂದ ಜೀವನ ನಡೆಸಲು ಅಂದಿನ ಕಾಲದಲ್ಲಿಯೇ 40 ರೂ.ಗಳ ಮಾಸಾಶನ, ಅಂಗವೀಕಲರು ಮತ್ತು ಅನಾಥರಿಗೆ ಅರ್ಥಿಕ ನೆರವು ನೀಡಿದರು. ಪದವಿ ಪಡೆದ ಲಕ್ಷಾಂತರ ನಿರುದ್ಯೋಗಿಗಳಿಗೆ ಸ್ಟೈಫಂಡ್ ಯೋಜನೆಯನ್ನು ಜಾರಿಗೊಳಿಸಿ ದುರ್ಬಲರ ಮನೆಯ ದೀಪ ಬೆಳಗಿದರೆಂದು ಸ್ಮರಿಸಿದರು.

ಗರ್ಗೇಶ್ವರಿ, ಯಡದೊರೆ, ತಿ.ನರಸೀಪುರ ಪಟ್ಟಣದ ದಾರಿಯುದ್ದಕ್ಕೂ ಸಂಘ ಸಂಸ್ಥೆ ಮುಖಂಡರು ರಥಕ್ಕೆ ಭವ್ಯ ಸ್ವಾಗತ ಕೋರಿದರು. ತಹಸೀಲ್ದಾರ್ ಶೂಲದಯ್ಯ, ಬಿಇಓ ಮರಿಸ್ವಾಮಿ, ತಾ.ಪಂ ಸದಸ್ಯ ಚಂದ್ರಶೇಖರ್, ರಮೇಶ್, ಸಾಜಿದ್ ಅಹಮ್ಮದ್, ಕನ್ನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ರಾಜು, ಪ್ರಭುಸ್ವಾಮಿ, ಬಿ.ಮರಯ್ಯ, ಬಸವಣ್ಣ, ಕನ್ನಡ ಸೇನೆ ಪುಟ್ಟಸ್ವಾಮಿ, ತಾ.ಪಂ ಕಾರ್ಯ ನಿರ್ವಾಹಣಾಧಿಕಾರಿ ಬಿ.ಎಸ್.ರಾಜು, ವಿಎ ರಷೀದ್ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin