ಸಾಮಿಲ್‍ಗೆ ಬೆಂಕಿ : 10 ಲಕ್ಷ ಮೌಲ್ಯದ ಮರಗಳು ಆಹುತಿ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಮಾ.20- ಆಕಸ್ಮಿಕವಾಗಿ ಸಾಮಿಲ್‍ಗೆ ಬೆಂಕಿ ಹೊತ್ತಿದ ಪರಿಣಾಮ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡ ಗರುಡನಹಳ್ಳಿಯಲ್ಲಿ ತಡರಾತ್ರಿ ಕರಿಗೌಡರಿಗೆ ಸೇರಿದ ಸಾಮಿಲ್‍ಗೆ ಬೆಂಕಿ ಬಿದ್ದು ಈ ಅವಘಡ ಸಂಭವಿಸಿದೆ. ಕೂಡಲೇ ಸ್ಥಳೀಯರು ಅಗ್ನೀಶಾಮಕ ದಳಕ್ಕೆ ಮಾಹಿತಿ ನೀಡಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಆದರೆ ಕ್ಷಣಾರ್ಧದಲ್ಲಿ ಸಾಮಿಲ್ ಪೂರ ವ್ಯಾಪಿಸಿದ ಬೆಂಕಿ ಮರಗಳನ್ನು ಆಹುತಿ ಪಡೆದಿದೆ. ಈ ಸಂಬಂಧ ಬಸರಾಳು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin