ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 18 ಜೋಡಿಗಳು

ಈ ಸುದ್ದಿಯನ್ನು ಶೇರ್ ಮಾಡಿ

pandavapura

ಪಾಂಡವಪುರ, ಮಾ.24- ಪಟ್ಟಣದ ಶ್ರೀ ಬಾಲ ಶನೇಶ್ವರ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಡೆದ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ 18 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾನಿಗಳು, ಕಣ್ಣು ಎರಡು ಇದ್ದರೂ ಕಾಣುವ ನೋಟ ಒಂದೇ, ಹಾಗೇ ಕಿವಿ ಎರಡು ಇದ್ದರು ಕೇಳುವ ಧ್ವನಿ ಒಂದೇ ಇದು ಸೃಷ್ಠಿಯ ನಿಯಮ ಅದೇ ರೀತಿ ಗಂಡು ಮತ್ತು ಹೆಣ್ಣು ಎಂಬುದು ಎರಡು ದೇಹವಾದರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮೇಲೆ ತಾವು ಒಂದೇ ಎನ್ನುವ ರೀತಿ ಬಾಳ್ವೆ ನಡೆಸಬೇಕು ಎಂದು ಹೇಳಿದರು.

ಪಾಶ್ಚಿಮಾತ್ಯ ಸಂಸ್ಕೃತಿ ಯಲ್ಲಿ ಮದುವೆ ಎಂಬುದಕ್ಕೆ ಅರ್ಥವೇ ಇಲ್ಲ, ಇಬ್ಬರ ವ್ಯಕ್ತಿಗಳ ಸಂಬಂಧವನ್ನು ಮದುವೆ ಎನ್ನಲಾಗದು, ಆದರೆ ಭಾರತ ಸಂಸ್ಕೃತಿ ಗೆ ವಿಶೇಷ ಗೌರವವಿದೆ. ನಾವು ನಮ್ಮ ಸಂಸ್ಕೃತಿ ಯನ್ನ ಉಳಿಸಿ ಬೆಳೆಸಿಕೊಂಡು ಹೋಗುವ ಹಾಗೆ ನಡೆದುಕೊಳ್ಳಬೇಕು ಇಲ್ಲವಾದರೆ ಸಂಸ್ಕೃತಿ ಯ ಉಳಿವು ಅಸಾಧ್ಯ ಎಂದು ತಿಳಿಸಿದರು.ಶ್ರೀರಂಗಪಟ್ಟಣದ ಚಂದ್ರವನದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಸರಳ ವಿವಾಹ ಮಾಡುವ ವ್ಯಕ್ತಿಗಳು ಸಮಾಜ ಸೇವೆಯ ದೃಷ್ಟಿಯಿಂದ ಎಲ್ಲರ ಬಳಿ ತೆರಳಿ ಹಣ ವಸೂಲಿ ಮಾಡಿ ಸಾಕಷ್ಟು ಶ್ರಮವಹಿಸಿ ಮದುವೆ ಮಾಡುತ್ತಾನೆ, ಅದರ ಸದುಪಯೋಗವಾಗಬೇಕು ಇಲ್ಲವಾದರೆ ಅವರ ಶ್ರಮಕ್ಕೆ ಬೆಲೆ ಇಲ್ಲದಂತಾಗುತ್ತದೆ ಎಂದರು.

ಈ ಸರಳ ವಿವಾಹ ಮಾಡುತ್ತಿರುವ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ ಧರ್ಮದರ್ಶಿ ರವಿತೇಜರವರು ಇಂತಹ ಕಾರ್ಯ ತುಂಬ ಶ್ಲಾಘನೀಯ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ಒಬ್ಬರಿಗೆ ಒಬ್ಬರು ನಾವೇ ಮೇಲು ಅನ್ನುವುದನ್ನು ಬಿಡಬೇಕು ಆಗ ಮಾತ್ರ ಸುಂದರ ಸಂಸಾರ ಸಾಧ್ಯ ಎಂದು ಕಿವಿ ಮಾತು ಹೇಳಿದರು.ಸಮಾರಂಭದಲ್ಲಿ 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸುನೀತಾ ಪುಟ್ಟಣ್ಣಯ್ಯರವರು ಮಾಂಗಲ್ಯ ಹಾಗೂ ಕಾಲುಂಗುರ ವಿತರಣೆ ಮಾಡಿದರು.ಸಮಾರಂಭದಲ್ಲಿ ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ರೇವಣ್ಣ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯನವರ ಪತ್ನಿ ಸುನೀತಪುಟ್ಟಣ್ಣಯ್ಯ, ಪುರಸಭೈ ಅಧ್ಯಕ್ಷೆ ವಿನೂತಶಿವಣ್ಣ, ಉಪಾಧ್ಯಕ್ಷೆ ರಾಧಮಣಿ ಜಿ.ಪಂ ಸದಸ್ಯ ತ್ಯಾಗರಾಜು, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಕುಬೇರ, ರೈತ ಮುಖಂಡ ಎಚ್.ಎನ್.ವಿಜಯಕುಮಾರ್, ರೇವಣ್ಣ ಅಭಿಮಾನಿ ಸಂಘದ ಕಾರ್ಯದರ್ಶಿ ಲಕ್ಷ್ಮೀಸಾಗರ ಜಯರಾಮು ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin