ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿ

ಈ ಸುದ್ದಿಯನ್ನು ಶೇರ್ ಮಾಡಿ

devanahalli

ದೇವನಹಳ್ಳಿ, ಸೆ.17- ಇತ್ತೀಚಿನ ದಿನಗಳಲ್ಲಿ ದುಂದುವೆಚ್ಚ ಮಾಡಿ ಮದುವೆ ಮಾಡುವ ಬದಲು ಸಾಮೂಹಿಕ ವಿವಾಹ ಮಾಡಿದರೆ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು. ಪಟ್ಟಣದ ಗಿರಿಯಮ್ಮ ಸರ್ಕಲ್‍ನಲ್ಲಿ ಶ್ರೀ ಮುನೇಶ್ವರಸ್ವಾಮಿ ಹಾಗೂ ಶ್ರೀ ಅಕ್ಕಯ್ಯಮ್ಮ ದೇವಾಲಯ ಅಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ 9ನೆ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ವಧು-ವರರಿಗೆ ಶುಭಹಾರೈಸಿ ಮಾತನಾಡಿದರು.ಆಡಂಬರದ ಮದುವೆಗಿಂತ ಸಾಮೂಹಿಕ ಮದುವೆಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಸ್ವಪ್ರತಿಷ್ಠೆಗಳಿಗಾಗಿ ಆಡಂಬರದ ಮದುವೆ ಮಾಡುವ ಬದಲು ಸಾಮೂಹಿಕ ವಿವಾಹಗಳಿಗೆ ಹೆಚ್ಚಿನ ಒತ್ತು ನೀಡಿದರೆ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತದೆ ಎಂದರು.

ಶಾಸಕ ಪಿಳ್ಳ ಮುನಿಶಾಮಪ್ಪ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಶಾಂತಿ-ನೆಮ್ಮದಿ ಇರಬೇಕಾದರೆ ಭಗವಂತನ ಕಡೆ ಹೆಚ್ಚು ಒಲವು ತೋರಿಸಬೇಕು. ಭಗವಂತನನ್ನು ನಂಬಿದರೆ ಕೈಬಿಡುವುದಿಲ್ಲ. ಅದಕ್ಕಾಗಿ ಆಧ್ಯಾತ್ಮಿಕತೆ ಕಡೆ ಜನರು ಹೆಚ್ಚು ಭಕ್ತಿ ಮೂಡಿಸಬೇಕು ಎಂದು ಹೇಳಿದರು.ಸೇವಾ ಟ್ರಸ್ಟಿನ ಅಧ್ಯಕ್ಷ ಎಂ. ವಾಸುದೇವಮೂರ್ತಿ ಮಾತನಾಡಿ, ಕಳೆದ 9 ವರ್ಷಗಳಿಂದ ನಮ್ಮ ಟ್ರಸ್ಟ್‍ನಿಂದ ಸಾಮೂಹಿಕ ವಿವಾಹ ಏರ್ಪಡಿಸಲಾಗುತ್ತಿದ್ದು, ಬಡವರಿಗೆ ಈ ಸಾಮೂಹಿಕ ವಿವಾಹದಿಂದ ಅನುಕೂಲವಾಗುತ್ತದೆ ಎಂದರು.ಮಾಜಿ ಪುರಸಭಾ ಅಧ್ಯಕ್ಷ ಸಿ.ಜಗನ್ನಾಥ್, ಎಂ.ನಾರಾಯಣಸ್ವಾಮಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ಹನುಮಂತಪ್ಪ, ಪುರಸಭಾ ಸದಸ್ಯರಾದ ನರಸಿಂಹಮೂರ್ತಿ, ಎಂ.ನಾರಾಯಣಸ್ವಾಮಿ, ಮುಖಂಡ ಪಟೇಲ್ ದೊಡ್ಡವೆಂಕಟಪ್ಪ, ಟ್ರಸ್ಟಿನ ಕಾರ್ಯದರ್ಶಿ ಡಿ.ಎಂ. ವೇಣುಗೋಪಾಲ್, ಡಿ.ಎಂ.ಶ್ರೀನಿವಾಸಮೂರ್ತಿ, ಸದಸ್ಯ ಕೆ. ಮಂಜುನಾಥ್, ಮುನೇಶ್ವರಸ್ವಾಮಿ ಸನ್ನಿಧಿಯ ಅರ್ಚಕ ಗೋಪಿ ಮೊದಲಾದವರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin