ಸಾಯಿಬಾಬಾ ಮೋಕ್ಷರಿಗೆ ಮೋಕ್ಷ ಚಿಂತಾಮಣಿ : ಕಬೀರ ಇಬ್ರಾಹಿಂ 

ಈ ಸುದ್ದಿಯನ್ನು ಶೇರ್ ಮಾಡಿ

5

ಕೌಜಲಗಿ,ಮಾ.13- ಸರ್ವಧರ್ಮಗಳ ಸಮನ್ವಯದ ಸಾಕಾರ ಮೂರ್ತಿ, ಮನುಕುಲದ ಉದ್ಧಾರಕ, ನಂಬಿದವರಕಾಮಧೇನು-ಕಲ್ಪವೃಕ್ಷ ಭಗವಾನ ಸಾಯಿಬಾಬಾ ಅವರು ಮೋಕ್ಷರಿಗೆ ಮೋಕ್ಷಚಿಂತಾಮಣಿಯಾಗಿದ್ದರು ಎಂದು ಮಹಾಲಿಂಗಪೂರದ ಕನ್ನಡ ಕಬೀರಇಬ್ರಾಹಿಂ ಸುತಾರ ಹೇಳಿದರು.ಕುಲಗೋಡ ಪೊಲೀಸ್ ಠಾಣೆಆವರಣದಲ್ಲಿ ಆಯೋಜಿಸಿದ ಸಾಯಿಬಾಬಾರವರ 2ನೇ ಜಾತ್ರಾ ಮಹೋತ್ಸವದ ಆಧ್ಯಾತ್ಮಿಕ ಚಿಂತನಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮರನ್ನು ನಂಬಿ-ಶ್ರದ್ಧೆಯಿಂದ ನಡೆದುಕೊಂಡರೆ ಅಂತವರಿಗೆ ಉತ್ತಮ ಫಲ ಸಿಗುತ್ತದೆ. ವೇದವ್ಯಾಸ ಮುನಿಗಳು ಹೇಳಿರುವಂತೆ, ವಯೋವೃದ್ಧರು, ತಪಸ್ವಿಗಳು, ಆರೂಢರು, ಅವಧೂತರು, ವಿಶ್ವಪ್ರೇಮಿಗಳಾದ ಮಹಾತ್ಮರಿಗೆ ಭಯಭಕ್ತಿಯಿಂದ ಜೀವನದಲ್ಲಿ ಒಂದು ಸಾರಿಯಾದರೂ ಸಾಕು ನಮಸ್ಕರಿಸಿದರೆ, ಪುಣ್ಯಾತ್ಮರು ಮನಪೂರ್ವಕವಾಗಿ ಅನುಗ್ರಹಿಸಿದರೆ ಮನುಷ್ಯನಿಗೆಆಯುಷ್ಯವೃದ್ಧಿ, ಬ್ರಹ್ಮಜ್ಞಾನ, ಯಶಸ್ಸು ಮತ್ತು ಬಲ ಅಥವಾ ಶಕ್ತಿ ಈ ನಾಲ್ಕು ಬಗೆಯ ಲಾಭಗಳು ದೊರೆಯುತ್ತವೆಎಂದರು.

ನಿಜವಾದಗುರುಪುತ್ರರು ಸಾವಿಗೆ ಹೆದರುವುದಿಲ್ಲ. ಸ್ಥೂಲ ಶರೀರಎಂಬುದುಒಂದು ಅಂಗಿ ಇದ್ದಂತೆ.ಜನನ ಎಂದರೆ ಹೊಸ ಅಂಗ ತೊಟ್ಟಂತೆ, ಮರಣ ಎಂಬುದು ಹಳೆ ಅಂಗಿ ಕಳಚಿದಂತೆ ಆಗುತ್ತದೆ. ಈ ಶರೀರಕ್ಕೆ ಸಾವಿದ್ದು, ಜೀವಾತ್ಮಕ್ಕೆ ಸಾವಿಲ್ಲ. ಮನುಷ್ಯನಾಗಿರುವಾಗಲೇಆತ್ಮೋದ್ಧಾರದ ಕಾರ್ಯಗಳನ್ನು ಮಾಡಬೇಕು.ಶರಣ-ಸಂತರ, ಮಹಾಂತರಅನುಗ್ರಹದಿಂದಾಗಿ ಬ್ರಹ್ಮವಿದ್ಯೆಜೀವನದಲ್ಲಿಯಶಸ್ಸು-ಕೀರ್ತಿ ಮತ್ತು ಬಲ ಅಥವಾ ವಿಶಿಷ್ಠ ಶಕ್ತಿ ಲಭಿಸುತ್ತದೆ ಎಂದು ಅವರು ಹೇಳಿದರು.ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿ ಮಾತನಾಡಿ, ನಮ್ಮದೇಶ ಸಾಹಿತ್ಯ-ಸಂಸ್ಕೃತಿ , ಆಧ್ಯಾತ್ಮಿಕ ಚಿಂತನಗಳ ತವರೂರಾಗಿದೆ.ಗುರುವಿನ ಕರುಣೆಯಿಂದಾಗಿ ಹರನನ್ನಾದರೂ ಗೆಲ್ಲಬಹುದು.ಶರಣರ ಸೂಳ್ನುಡಿಗಳಲ್ಲಿ ಆತ್ಮೋದ್ಧಾರದ ಶಕ್ತಿಯಿದೆ.ಮನುಷ್ಯ ಈ ಸತ್ಯಅರಿತುಕೊಂಡುಜೀವನ ಸಾಗಿಸಬೇಕೆಂದು ಭಕ್ತರಿಗೆ ಉಪದೇಶಿಸಿದರು. ವೇದಿಕೆಯಲ್ಲಿ ಬಲಭೀಮದೇವಸ್ಥಾನದಅರ್ಚಕ ಹಣಮಂತ ಪೂಜೇರ, ಶತಾಯುಷಿ ಕೆಂಚವ್ವ ಮನ್ನಿಕೇರಿ ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin