ಸಾಯುತ್ತೇನೆ ಸುರಿದುಕೊಂಡು ಹೆದರಿಸಿದ ಪತ್ನಿಗೆ ಕೋಪದಲ್ಲಿ ಬೆಂಕಿಯಿಟ್ಟ ಗಂಡ

ಈ ಸುದ್ದಿಯನ್ನು ಶೇರ್ ಮಾಡಿ

wife

ಚೆನ್ನೈ, ಆ.9- ಆತುರದ ಕೈಗೆ ಬುದ್ಧಿ ಕೊಟ್ಟರೆ ಏನೆಲ್ಲ ಎಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಜಗಳವಾಡಿಕೊಂಡು ಪತಿಯೇ ಸಿಟ್ಟಿನಿಂದ ಪತ್ನಿಗೆ ಬೆಂಕಿ ಹಚ್ಚಿದ ಘಟನೆ ಚೆನ್ನೈನಲ್ಲಿ ನಡೆದಿದೆ.  ಓಲಾ ಕ್ಯಾಬ್ ಚಾಲಕನಾಗಿರುವ ನಾಗರಾಜನ್ ಎಂಬಾತ ಪತ್ನಿ ಪ್ರೇಮಾರನ್ನು ಕೊಲೆ ಮಾಡಿದ್ದಾನೆ. ಚೆನ್ನೈನ ತೆಯ್ನಾಮ್‍ಪೇಟ್‍ಗೆ ಕಾರಿನಲ್ಲಿ ಇಬ್ಬರು ಮಕ್ಕಳೊಂದಿಗೆ ನಾಗರಾಜನ್ ಹೋಗುತ್ತಿದ್ದ. ದಂಪತಿ ನಡುವೆ ಮನೆಯಲ್ಲಿಯೇ ಜಗಳವಾಗಿದ್ದು, ಕಾರಿನಲ್ಲಿ ಹೋಗುವಾಗಲೂ ಅದು ಮುಂದುವರಿದಿತ್ತು. ಇದರಿಂದ ಸಿಟ್ಟಾದ ಪತ್ನಿ ಗಂಡನಿಗೆ ಹೆದರಿಸಲು ಕಾರಿನಲ್ಲಿದ್ದ ಪೆಟ್ರೋಲ್ ಬಾಟಲಿ ತೆಗೆದುಕೊಂಡು ಮೈಮೇಲೆ ಸುರಿದುಕೊಂಡು ಸಾಯುತ್ತೇನೆ ಎಂದಿದ್ದಾಳೆ.

ಸಿಟ್ಟಿನಲ್ಲಿದ್ದ ಗಂಡ ಕಾರಿಗೆ ಬೆಂಕಿ ಹಚ್ಚಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆ ಆವರಿಸಿದೆ. ಪತ್ನಿ ಮೃತಪಟ್ಟರೆ, ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin