ಸಾಯುವ ಮುನ್ನ ತಾಯಿ ಜೊತೆ ಮಾತನಾಡಿದ್ದ ಆ ಯೋಧ
ಈ ಸುದ್ದಿಯನ್ನು ಶೇರ್ ಮಾಡಿ
ಶ್ರೀನಗರ, ಸೆ.20- ಜಮ್ಮು-ಕಾಶ್ಮೀರದ ಉರಿಸೆಕ್ಟರ್ನಲ್ಲಿರುವ ಸೇನಾ ನೆಲೆಗಳ ಮೇಲೆ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರೊಬ್ಬರು ತನ್ನ ತಾಯಿ ಜತೆ ಮಾತನಾಡಿದ ಸಾರಾಂಶ ಹೊರ ಬಿದ್ದಿದೆ. ಉತ್ತರ ಪ್ರದೇಶದ ಯೋಧ ಲ್ಯಾನ್ಸ್ನಾಯಕ್ ಆರ್.ಕೆ.ಯಾದವ್(33) ಅವರು ತಾಯಿಯ ಜತೆ ಕೊನೆಯ ಬಾರಿ ಫೋನ್ನಲ್ಲಿ ಮಾತನಾಡಿದ ಸಾರಾಂಶ ಹೀಗಿದ್ದು, ಅಮ್ಮ ಅಪಾಯವಿರುವ ಸ್ಥಳಕ್ಕೆ ಹೋಗುತ್ತಿದ್ದೇನೆ. ಆ ಮೇಲೆ ಫೋನ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಏನು ಮಾತನಾಡೋಬೇಕೋ ಈಗಲೇ ಮಾತನಾಡಮ್ಮ ಎಂದು ಯೋಧ ಹೇಳಿರುವ ವಿಷಯ ಎಂಥವರಿಗಾದರೂ ಕಣ್ಣಲ್ಲಿ ನೀರು ಬರಿಸುತ್ತದೆ. ಯೋಧ ಯಾದವ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಹುತಾತ್ಮರಾಗಿರುವ ವಿಷಯ ಪತ್ನಿಗೆ ಇನ್ನೂ ತಿಳಿಸಿಲ್ಲ.
ಈ ದಾಳಿಯಲ್ಲಿ 18 ಭಾರತೀಯ ಯೋಧರು ಹುತಾತ್ಮರಾಗಿದ್ದು, ದೇಶಾದ್ಯಂತ ಪಾಕ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ
► Follow us on – Facebook / Twitter / Google+
Facebook Comments