ಸಾರಿಗೆ ಬಸ್ ಪಲ್ಟಿ : 35ಕ್ಕೂ ಹೆಚ್ಚು ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

 

accident-bagepalli

ಬಾಗೇಪಲ್ಲಿ, ಅ.4- ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‍ಆರ್‍ಟಿಸಿ ಬಸ್ ಪಲ್ಟಿಯೊಡೆದ ಪರಿಣಾಮ ಬಸ್‍ನಲ್ಲಿದ್ದ 35 ಪ್ರಯಾಣಿಕರಿಗೆ ಗಾಯಳಾಗಿದ್ದು, 7ಮಂದಿಯ ಸ್ಥಿತಿ ಚಿಂತಾಜನಕವಾಗಿರುವ ಘಟನೆ ತಾಲ್ಲೂಕಿನ ಮಿಟ್ಟೆಮರಿ ಬಳಿಯ ಕನ್ನಂಪ್ಪಲ್ಲಿ ಗ್ರಾಮದ ಬಳಿ ನಡೆದಿದೆ.  ಯಶೋಧಮ್ಮ, ಸುಮಂತು, ಬೈರರೆಡ್ಡಿ, ನಾರಾಯಣಪ್ಪ, ಮಮತಾ, ಜಯಲಕ್ಷ್ಮಿ, ಕೃಷ್ಣಪ್ಪ, ಪಲ್ಲವಿ, ಸತೀಶ್, ರಜನಿ, ಅಶೋಕ್ ಸೇರಿದಂತೆ ಮತ್ತಿತರರಿಗೆ ಗಾಯಲಾಗಿವೆ. ಇದರಲ್ಲಿ ಹೆಚ್ಚು ವಿದ್ಯಾರ್ಥಿಗಳೇ ಇದ್ದಾರೆ.ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತಿಮ್ಮಸಂದ್ರ ಗ್ರಾಮದಿಂದ ಬಾಗೇಪಲ್ಲಿಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದು ಈ ಘಟನೆ ಸಂಭವಿಸಿದೆ.

ಕಳೆದ 10 ದಿನಗಳ ಹಿಂದೆ ಬಾಗೇಪಲ್ಲಿ ಬಸ್ ನಿಲ್ದಾಣದ ಒಳಗೆ ಕೆಎಸ್‍ಆರ್‍ಟಿಸಿ ಬಸ್ ನುಗ್ಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಇಂದು ತಾಲ್ಲೂಕಿನ ಕನ್ನಂಪಲ್ಲಿ, ತಿಮ್ಮಸಂದ್ರ ಸೇರಿದಂತೆ ಬೇರೆ ಬೇರೆ ಊರುಗಳಿಂದ ಹೆಚ್ಚು ವಿದ್ಯಾರ್ಥಿಗಳು ಬಾಗೇಪಲ್ಲಿಗೆ ಶಾಲೆಗೆ ತೆರಳುತ್ತಿದ್ದು, ಹಾಗಾಗಿ ವಿದ್ಯಾರ್ಥಿಗಳಿಗೇ ಹೆಚ್ಚಿನ ಗಾಯಗಳಾಗಿವೆ. ಹಾಳಾದ ರಸ್ತೆ ಹಾಗೂ ಹಳೆಯ ಬಸ್‍ಗಳಿಂದಲೇ ಇಂತಹ ಅವಘಡಗಳು ಮೇಲಿಂದ ಮೇಲೆ ಸಂಭವಿಸುತ್ತಲೇ ಇರುತ್ತವೆ. ಹಳೆ ಬಸ್‍ಗಳನ್ನು ಬದಲಾಯಿಸುವಂತೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಘಟನೆ ನಡೆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ರಸ್ತೆ ದುರಸ್ತಿಗೊಳಿಸಿ, ಹೊಸ ಬಸ್‍ಗಳನ್ನು ಬಿಡುವಂತೆ ಈ ಭಾಗದ ಗ್ರಾಮಸ್ಥರು ಇದೇ ವೇಳೆ ಆಗ್ರಹಿಸಿದ್ದಾರೆ.ಬಾಗೇಪಲ್ಲಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

 

Facebook Comments

Sri Raghav

Admin