ಸಾರ್ವಜನಿಕರೊಂದಿಗೆ ಅನುಚಿತ ವರ್ತಿಸಿದ ಎಸ್‍ಐ ಎತ್ತಂಗಡಿ

ಈ ಸುದ್ದಿಯನ್ನು ಶೇರ್ ಮಾಡಿ

ಪಾಂಡವಪುರ, ಅ.27- ಕಾವೇರಿ ಚಳವಳಿಗಾರರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ, ಅಮಾಯಕರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಪಾಂಡವಪುರ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅಯ್ಯನಗೌಡ ಅವರು ಕಡೆಗೂ ಕೆ.ಎಂ.ದೊಡ್ಡಿಗೆ ವರ್ಗಾವಣೆಗೊಂಡಿದ್ದಾರೆ.ಜತೆಗೆ ಸೆ.12ರಂದು ಪಟ್ಟಣದಲ್ಲಿ ನಡೆದ ಕಾವೇರಿ ಗಲಭೆಗೆ ಸಂಬಂಧಿಸಿದಂತೆ ಕೆಲವು ಅಮಾಯಕರನ್ನು ಬಂಧಿಸಿ ಅವರ ವಿರುದ್ಧ ಆರೇಳು ಕೇಸ್‍ಗಳನ್ನು ದಾಖಲಿಸಿ ಸಾರ್ವಜನಿಕರಿಗೆ ಪೊಲೀಸರಲ್ಲಿ ಭಯ ಹುಟ್ಟುವಂತೆ ಮಾಡಿದ್ದರು. ಹೀಗಾಗಿ ಎಸ್‍ಐ ಅಯ್ಯನಗೌಡ ಅವರ ವರ್ಗಾವಣೆಗೆ ಪಾಂಡವಪುರ ತಾಲೂಕಿನಲ್ಲಿ ವ್ಯಾಪಕ ಕೂಗು ಕೇಳಿಬಂದಿತ್ತು. ಹೀಗಾಗಿ ಮಳವಳ್ಳಿ ತಾಲೂಕಿನ ಕೆ.ಎಂ.ದೊಡ್ಡಿ (ಭಾರತೀನಗರ) ಪೊಲೀಸ್ ಠಾಣೆಗೆ ಎಸ್‍ಐ ಅಯ್ಯನಗೌಡ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin