ಸಾರ್ವಜನಿಕ ಶೌಚಾಲಯಗಳನ್ನು ಉಪಯೋಗಿಸಲು ಮಂಗಳಮುಖಿಯರಿಗೆ ಅನುಮತಿ

ಈ ಸುದ್ದಿಯನ್ನು ಶೇರ್ ಮಾಡಿ

Mangalamukhi

ನವದೆಹಲಿ. ಎ.07 : ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರವು ಮಂಗಳಮುಖಿಯರಿಗೆ ಸಾರ್ವಜನಿಕ ಶೌಚಾಲಯಗಳನ್ನು ಉಪಯೋಗಿಸಲು ಅವಕಾಶ ನೀಡಿದೆ. ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲೀಕರಣ ಸಚಿವಾಲಯವು ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತದ ಸರ್ಕಾರಗಳಿಗೆ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಮಂಗಳಮುಖಿಯರು ತಮ್ಮ ಆಯ್ಕೆಯ ಶೌಚಾಲಯಗಳನ್ನು ಬಳಸಲು ಮುಕ್ತ ಅವಕಾಶ ನೀಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದೆ ಸುತ್ತೋಲೆಯನ್ನು ಸ್ವಚ್ಛ ಭಾರತ ಗ್ರಾಮೀಣ ಕಾರ್ಯಕ್ರಮದ ಘಟಕಗಳಿಗೂ ರವಾನಿಸಲಾಗಿದ್ದು ಸ್ವಚ್ಛ ಭಾರತ ಅಭಿಯಾನದಲ್ಲಿ ಈ ಸಮುದಾಯ ಭಾಗವಹಿಸಲು ಸಹ ಅವಕಾಶ ನೀಡಬೇಕು ಎಂದು ಸೂಚಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin