ಸಾಲಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

manjunath-suicide

ಬೇಲೂರು, ಅ.6- ರೈತರೊಬ್ಬರು ಟ್ರಾಕ್ಟರ್ ಕೊಳ್ಳಲು ತಮ್ಮ ಜಮೀನಿನ ಮೇಲೆ ಮಾಡಿದ್ದ ಸಾಲವನ್ನು ತೀರಿಸಲಾಗದೆ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಕನಾಯ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಕನಾಯ್ಕನಹಳ್ಳಿ ಗ್ರಾಮದ ರೈತ ಮಂಜುನಾಥ್(38) ಎಂಬುವವರೆ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಮೃತ ಪಟ್ಟಿರುವ ದುರ್ದೈವಿಯಾಗಿದ್ದಾರೆ. ಇವರು 2 ಟ್ರಾಕ್ಟರ್‍ಗಳನ್ನು ಕೊಳ್ಳಲು ತಮ್ಮ 3 ಎಕರೆ ಜಮೀನಿನ ಮೇಲೆ ಖಾಸಗಿ ಫೈನಾನ್ಸ್‍ನಲ್ಲಿ ಲಕ್ಷಾಂತರ ರೂ.ಗಳನ್ನು ಮತ್ತು ಜಮೀನಿನಲ್ಲಿ ಬೆಳೆ ಬೆಳೆಯಲು ವಿವಿಧ ಸಂಘಗಳಿಂದ, ಗ್ರಾಮಸ್ಥರಿಂದ ಹಾಗೂ ಸಂಬಂಧಿಕರಿಂದ ಕೈಸಾಲವೆಂಬಂತೆ ಸಾವಿರಾರು ರೂ.ಗಳನ್ನು ಪಡೆದಿದ್ದಾರೆಂದು ತಿಳಿದು ಬಂದಿದೆ.

ಸರಿಯಾದ ಸಮಯಕ್ಕೆ ಸಾಲದ ಕಂತನ್ನು ಕಟ್ಟಲಾಗಲಿಲ್ಲ ಮತ್ತು ಕೈ ಸಾಲವನ್ನು ತೀರಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣದಿಂದ ಮನ ನೊಂದು ನಿನ್ನೆ ಬೆಳಗ್ಗೆ ಕನಾಯ್ಕನಹಳ್ಳಿಯ ತಮ್ಮ ಮನೆಯಲ್ಲಿ ಎಲ್ಲರು ಮಲಗಿರುವ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮೃತರಿಗೆ ಪತ್ನಿ ಮತ್ತು 6 ವರ್ಷದ ಮತ್ತು 4 ವರ್ಷದ ಚಿಕ್ಕ ಹೆಣ್ಣು ಮಕ್ಕಳಿದ್ದು, ಈ ಮಕ್ಕಳ ಸ್ಥಿತಿ ಕಂಡು ಸಾರ್ವಜನಿಕರು ಮರುಕ ಪಡುತ್ತಿದ್ದುದು ಕಾಣಬಹುದಾಗಿತ್ತು.ರೈತ ಮಂಜುನಾಥ್ ನೇಣು ಬಿಗಿದುಕೊಂಡಿರುವ ವಿಷಯ ತಿಳಿದು ಬೇಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin