ಸಾಲಕ್ಕೆ ಹೆದರಿ ಸ್ಟುಡಿಯೋ ಮಾಲೀಕ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

suicide

ಮಂಡ್ಯ, ಅ.7- ಚೀಟಿ ವ್ಯವಹಾರದಲ್ಲಿ ನಷ್ಟವುಂಟಾಗಿ, ಮಾಡಿದ್ದ ಸಾಲ ತೀರಿಸಲಾಗದೆ ಸ್ಟುಡಿಯೋ ಮಾಲೀಕರೂ ಆಗಿದ್ದ ಫೋಟೋಗ್ರಾಫರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೂಲತಃ ಆತಗೂರು ಹೋಬಳಿ ಹೆಮ್ಮನಹಳ್ಳಿ ಗ್ರಾಮದ ರವಿ(45) ಆತ್ಮಹತ್ಯೆಗೆ ಶರಣಾದವರು.ಕಳೆದ 8-10 ವರ್ಷಗಳಿಂದ ಮದ್ದೂರಿನ ಶಿವಪುರದಲ್ಲಿ ರವಿ ಹೈಟೆಕ್ ಸ್ಟುಡಿಯೋ ನಡೆಸುತ್ತಿದ್ದರು. ಚೀಟಿ ವ್ಯವಹಾರದಲ್ಲಿ ನಷ್ಟ ಉಂಟಾದ ಪರಿಣಾಮ ಕೈ ಸಾಲ ಮಾಡಿಕೊಂಡಿದ್ದರು.ಸಾಲ ತೀರಿಸಲಾಗದೆ ಸ್ಟುಡಿಯೋ ಎದುರಿನ ಶ್ರೀನಿವಾಸ ಸಮುದಾಯ ಭವನದ ಜನರೇಟರ್ ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin