ಸಾಲಬಾಧೆಗೆ ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Farmers'-suicide

ಪಾಂಡವಪುರ,ಆ.20-ಸಾಲಬಾಧೆ ತಾಳಲಾರದೆ ರೈತನೊಬ್ಬ ಜಮೀನಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ತಾಲ್ಲೂಕಿನ ನಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ನಲಹಳ್ಳಿ ಗ್ರಾಮದ ಕಾಳೇಗೌಡ ಮೃತ ರೈತನಾಗಿದ್ದು , ಇವರು ಪಿಎಸ್‍ಇಎಸ್ ಬ್ಯಾಂಕ್‍ನಲ್ಲಿ 30 ಸಾವಿರ ಹಾಗೂ ಇತರೆಡೆಯಿಂದ ಎರಡು ಲಕ್ಷ ರೂ. ಸಾಲ ಮಾಡಿದ್ದರು. ಇತ್ತೀಚೆಗಷ್ಟೇ ಜಮೀನಿನಲ್ಲಿ ಎರಡು ಕೊಳವೆ ಬಾವಿ ಕೊರೆಸಿದ್ದರು. ಆದರೆ ನೀರು ಬರದೆ ವಿಫಲಗೊಂಡಿದ್ದು, ಸಾಲಬಾಧೆ ಹೆಚ್ಚಾದ್ದರಿಂದ ಇಂದು ತಮ್ಮ ಜಮೀನಿನಲ್ಲೇ ನೇಣಿಗೆ ಶರಣಾಗಿದ್ದಾರೆ.
ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin