ಸಾಲಬಾಧೆ : ಕೆರೆಗೆ ಹಾರಿ ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

farmers
ಕೆ.ಆರ್.ಪೇಟೆ, ಡಿ.20- ತಾಲೂಕಿನ ಸಾಧುಗೋನಹಳ್ಳಿ ಗ್ರಾಮದ ರೈತನೊಬ್ಬ ಸಾಲದ ಬಾಧೆ ತಾಳಲಾರದೆ ದೇವೀರಮ್ಮಣ್ಣಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸಾಧುಗೋನಹಳ್ಳಿ ಗ್ರಾಮದ ಜವರೇಗೌಡ ಅವರ ಮಗ ರಾಜೇಗೌಡ(50) ಆತ್ಮಹತ್ಯೆ ಮಾಡಿಕೊಂಡ ರೈತ.ಎರಡು ಎಕರೆ ಜಮೀನು ಹೊಂದಿರುವ ರೈತ ರಾಜೇಗೌಡ ಎರಡು ಕೃಷಿ ಕೊಳವೆ ಬಾವಿ ಕೊರೆಸಿದ್ದರು ಎರಡೂ ಬಾವಿಗಳಲ್ಲಿ ಅಂತರ್ಜಲ ಬತ್ತಿಹೋಗಿತ್ತು. ಇದಕ್ಕಾಗಿ ಹೇಮಗಿರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 50ಸಾವಿರ ಬೆಳೆ ಸಾಲ ಇದಲ್ಲದೆ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳಿಂದ 2ಲಕ್ಷಕ್ಕೂ ಹೆಚ್ಚು ಕೈಸಾಲ ಪಡೆದು ಜಮೀನಿಗೆ ಕಬ್ಬಿನ ಬೆಳೆ ಹಾಕಿದ್ದರು ಎನ್ನಲಾಗಿದೆ.ಮಳೆಯಿಲ್ಲದೆ ಬೋರ್‍ವೆಲ್‍ನಲ್ಲಿ ನೀರು ಬತ್ತಿಹೋದ ಕಾರಣ ಕಬ್ಬು ಒಣಗಿ ಹೋಗಿತ್ತು ಇದರಿಂದ ಸಾಲದ ತೀರಿಸುವ ದಾರಿ ಕಾಣದೇ ಮನನೊಂದಿದ್ದ ರೈತ ರಾಜೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin