ಸಾಲಬಾಧೆ : ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

turvekere

ತುರುವೇಕೆರೆ, ಫೆ.27- ಸಾಲಬಾಧೆಯಿಂದ ನೊಂದ ರೈತನೋರ್ವ ತನ್ನ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದಬ್ಬೇಘಟ್ಟ ಹೋಬಳಿಯ ಲಕ್ಷ್ಮಿದೇವರಹಳ್ಳಿಯಲ್ಲಿ ನೆಡದಿದೆ.ಮೃತ ರೈತ ನಂಜಪ್ಪ (65) ಮೃತ ರೈತ.ಈತನು ಸುಮಾರು ವರ್ಷ ವ್ಯವಸಾಯ ಮಾಡಿಕೊಂಡು ಜೀವನ ನೆಡೆಸುತ್ತಿದ್ದರು. ಕೃಷಿಗಾಗಿ ದೆಬ್ಬೇಘಟ್ಟ ಎಸ್.ಬಿ.ಎಮ್. ಬ್ಯಾಂಕ್‍ನಿಂದ ಹಾಗೂ ಖಾಸಗಿ ಲೇವಾದಾರರಿಂದ ಸುಮಾರು 4 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಎರಡು ಬೋರ್‍ವೆಲ್ ಗಳನ್ನು ಕೊರೆಸಿದ್ದು ಎರಡು ಬೋರ್‍ವೆಲ್ ಗಳು ವಿಪಲವಾಗಿದ್ದವು. ಇದರಿಂದ ಮನನೊಂದು ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇತನಿಗೆ ಓರ್ವ ಮಗ ಹಾಗೂ ಓರ್ವ ಮಗಳು ಇದ್ದಾರೆ. ಪಟ್ಟಣದ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin