ಸಾಲಭಾದೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ
ಮದ್ದೂರು, ಸೆ.8– ಸಾಲಭಾದೆ ತಾಳಲಾರದೆ ರೈತನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ತಾಲೂಕಿನ ಕಡಿಲವಾಗಿಲು ಗ್ರಾಮದಲ್ಲಿ ನಿನ್ನೆ ನಡೆದಿದೆ.ಕೆ.ಎಂ.ರಮೇಶ್(37) ಆತ್ಮಹತ್ಯೆಗೆ ಶರಣಾದ ರೈತನಾಗಿದ್ದು, 2 ಎಕರೆ ಜಮೀನು ಹೊಂದಿದ್ದ ಅವರು ಇತ್ತೀಚಿಗಷ್ಟೇ ಕೊಳವೆ ಬಾವಿ ಕೊರೆಸಿದ್ದರೂ, ಆದರೆ ನೀರು ಬರದೆ ವಿಫಲವಾಗಿತ್ತು. ಅಲ್ಲದೆ ಬೆಳೆದ ಬೆಳೆಗಳು ನೀರು ಇಲ್ಲದೆ ಒಣಗುತ್ತಿತ್ತು ಮತ್ತು ಸಾಲಗಾರರ ಕಾಟ ಹೆಚ್ಚಾಗಿತ್ತು. ಇದಕ್ಕೆ ಬೇಸತ್ತ ರೈತ ಮಂಗಳವಾರ ರಾತ್ರಿ ಊಟ ಮಾಡಿದ ನಂತರ ವಿಷ ಸೇವಿಸಿದ್ದರು.
ಆದರೆ ಕ್ರೀಮಿನಾಶಕ ಸೇವಿಸಿದ ವಿಷಯ ಗೊತ್ತಾಗುತ್ತಿದ್ದಂತೆ ಮನೆಯವರು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟರು.ವ್ಯವಸ್ಥಾಯ ಸೇವಾ ಸಹಕಾರ ಬ್ಯಾಂಕ್ನಲ್ಲಿ 45 ಸಾವಿರ, ವಿಜಯ ಬ್ಯಾಂಕ್ನಲ್ಲಿ 30 ಸಾವಿರ ಹಾಗೂ ಸುಮಾರು 3 ಲಕ್ಷದವರೆಗೂ ಕೈಸಾಲ ಮಾಡಿಕೊಂಡಿದ್ದರು.ಈ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
► Follow us on – Facebook / Twitter / Google+