ಸಾಲಮನ್ನ ಮಾಡ್ತೀವಿ ಅಂತ ಯಡಿಯೂರಪ್ಪ ಹಿಂದೇನು ಹೇಳಿದ್ರು.. ಈಗ್ಲೂ ಹೇಳ್ತಿದ್ದಾರೆ : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-vs-Kumaraswamy-

ವಿಜಯಪುರ, ಮೇ 26- ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಕಳೆದ ಚುನಾವಣೆಯಲ್ಲೂ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನ ಮಾಡುತ್ತೇನೆ ಎಂದು ಹೇಳಿದ್ದರು. ನಂತರ ಮಾತಿಗೆ ತಪ್ಪಿದರು. ಈಗಲೂ ಇದೇ ರಾಗ ಹಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕಳೆದ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನ ಮಾಡುತ್ತೇವೆ ಎಂದು ಹೇಳಿದ್ದರು. ಈಗಲೂ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲ ಮನ್ನ ಮಾಡುವುದಾಗಿ ಹೇಳಿದ್ದಾರೆ.ಅಧಿಕಾರಕ್ಕೆ ಬಂದ ನಂತರ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಾ ಎಂಬುದಾಗಿ ವಿಧಾನಸಭೆಯ ಕಲಾಪದಲ್ಲಿ ಹೇಳಿದ್ದರು. ಈಗ ಅದೇ ರಾಗ ಹಾಡುತ್ತಿದ್ದಾರೆ. ಈ ಬಾರಿಯಾದರೂ ನಿಜವಾಗಿಯೂ ಸಾಲ ಮನ್ನಾ ಮಾಡ್ತಾರಾ ಇಲ್ವ ಅನ್ನೋದನ್ನು ಜನರಿಗೆ ಈಗಲೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆ ರೈತರಿಗೆ ಅನುಕೂಲವಾಗಿಲ್ಲ. ಇದು ರೈತರ ಹಗಲು ದರೋಡೆ ಮಾಡುವ ಯೋಜನೆಯಾಗಿದೆ. ಸ್ಮಾರ್ಟ್ ಸಿಟಿ ಘೋಷಣೆಯಾಗಿದ್ದು 2015ರಲ್ಲಿ.

ಈ ಯೋಜನೆಗೆ 46 ಸಾವಿರ ಕೋಟಿ ಹಣ ನೀಡುವುದಾಗಿ ಪ್ರಧಾನಿ ಹೇಳಿದ್ದರು. ಆದರೆ, ನನ್ನ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಇದುವರೆಗೂ 200ಕೋಟಿಯನ್ನೂ ಕೊಟ್ಟಿಲ್ಲ . ಇದೇ ಮೋದಿ ಅವರ ಮೂರು ವರ್ಷದ ಸಾಧನೆ ಎಂದು ಸುದ್ದಿಗಾರರು ಮೋದಿ ಸರ್ಕಾರದ ಮೂರು ವರ್ಷದ ಸಂಭ್ರಮ ಕುರಿತು ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ ಉತ್ತರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin