ಸಾಲು ಸಾಲು ‘ರಜೆ ಭಾಗ್ಯ’

ಈ ಸುದ್ದಿಯನ್ನು ಶೇರ್ ಮಾಡಿ

Holiday

ಬೆಂಗಳೂರು, ಸೆ.9-ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ತೀರ್ಪು ಖಂಡಿಸಿ ಕನ್ನಡ ಒಕ್ಕೂಟ ಇದೇ 9 ರಂದು ರಾಜ್ಯ ಬಂದ್‍ಗೆ ಕರೆ ನೀಡಿರುವುದರಿಂದ ಸಾಲು ಸಾಲು ರಜೆಯ ಭಾಗ್ಯ ಜನರಿಗೆ ದೊರೆತಿದೆ.  9 ರಂದು ಬಂದ್ ಹಿನ್ನೆಲೆಯಲ್ಲಿ ರಜೆ ದೊರೆತರೆ, 10 ರಂದು ಎರಡನೇ ಶನಿವಾರ, 11 ಭಾನುವಾರವಾಗಿದೆ. 12ರಂದು ಬಕ್ರೀದ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು 8 ರಂದುಡ್ಯೂಟಿ ಮುಗಿಸಿ ಹೊರಟರೆ ಸೆ.13ಕ್ಕೆ ಕರ್ತವ್ಯಕ್ಕೆ ಹಾಜರಾಗಬಹುದು. ಶಾಲಾ-ಕಾಲೇಜುಗಳಿಗೆ ಇದೇ ಅನ್ವಯಿಸುವುದರಿಂದ ಸಾಲು ಸಾಲು ರಜೆಗಳು ದೊರೆಯಲಿವೆ. ಕೆಎಸ್‍ಆರ್‍ಟಿಸಿ-ಬಿಎಂಟಿಸಿ ಮುಷ್ಕರ, ಮಹದಾಯಿ ಹೋರಾಟ, ಕಾರ್ಮಿಕರ ಮುಷ್ಕರ ಈ ಎಲ್ಲಾ ಹಿನ್ನೆಲೆಯಲ್ಲಿ ಹಲವಾರು ರಜೆಗಳನ್ನು ಶಾಲಾ ಕಾಲೇಜುಗಳಿಗೆ ನೀಡಲಾಗಿದೆ. ಈಗ ಮತ್ತೆ ಬಂದ್ ಹಾಗೂ ಸಾಲು ಸಾಲು ರಜೆಗಳು ಸಿಗಲಿವೆ.

9 ರಂದು ಕರ್ನಾಟಕ ಬಂದ್

ಬೆಂಗಳೂರು, ಸೆ.6-ಕಾವೇರಿ ತೀರ್ಪು ಖಂಡಿಸಿ ಕನ್ನಡ ಒಕ್ಕೂಟ ಸೆ.9 ರಂದು ಮತ್ತೆ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದೆ.  ಕನ್ನಡ ಚಳವಳಿ ವಾಟಾಳ್ ನಾಗರಾಜ್ ಹಾಗೂ ಸಾ.ರಾ.ಗೋವಿಂದ್ ನೇತೃತ್ವದ ಕನ್ನಡ ಒಕ್ಕೂಟದ ವತಿಯಿಂದ ಬಂದ್ ನಡೆಸಲಾಗುತ್ತಿದೆ.  ರಾಜ್ಯ ಬಂದ್ ಕುರಿತು ಮಾತನಾಡಿದ ಕನ್ನಡ ಚಳವಳಿ ವಾಟಾಳ್ ನಾಗರಾಜ್ ಅವರು, ಕರ್ನಾಟಕ ಬಂದ್ ಅನಿವಾರ್ಯವಾಗಿದೆ ಎಂದು ಹೇಳಿದರು. ಮಹದಾಯಿ ಹೋರಾಟ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೂರು ರಾಜ್ಯ ಬಂದ್ ಆಚರಣೆ ಮಾಡಲಾಗಿದೆ. ಇದರಿಂದ ರಾಜ್ಯದ ಜನರಿಗೆ ತೊಂದರೆಯಾಗುತ್ತದೆ. ಈಗ ಮತ್ತೆ ಅನಿವಾರ್ಯವಾಗಿ ಬಂದ್ ಮಾಡಬೇಕಾಗುತ್ತದೆ. ನಾವು ಅಸಹಾಯಕರಾಗಿದ್ದೇವೆ. ಸುಪ್ರೀಂ ಕೋರ್ಟ್ ರಾಜ್ಯದ ವಿರುದ್ಧವಾಗಿ ತೀರ್ಪು ನೀಡಿದೆ. ಕೋರ್ಟ್ ನೀಡಿದ ಎಲ್ಲಾ ತೀರ್ಪುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಸಾ.ರಾ.ಗೋವಿಂದು ಮಾತನಾಡಿ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಾವೇರಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದಾರೆ. ಸುಪ್ರೀಂಕೋರ್ಟ್‍ಗೆ ತಪ್ಪು ಮಾಹಿತಿ ನೀಡಿ ಅನಗತ್ಯ ಆರೋಪ ಮಾಡಿದ್ದಾರೆ. ಕಾವೇರಿ ವಿಚಾರದಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಮೈಸೂರು, ಬೆಂಗಳೂರಿಗೆ ಕುಡಿಯುವ ನೀರು ಸಿಗುವುದಿಲ್ಲ. ಹೀಗಾಗಿ ಬೆಂಗಳೂರು ಜನರು ಕೂಡ ಹೋರಾಟಕ್ಕೆ ಬೆಂಬಲ ನೀಡಬೇಕು. 9 ರಂದು ನಡೆಯುವ ಬಂದ್‍ಗೆ ರಾಜ್ಯದ ಸಾವಿರಕ್ಕೂ ಹೆಚ್ಚು ಕನ್ನಡ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin