ಸಾಲ ಸೌಲಭ್ಯದ ಸುವರ್ಣವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu

ನಂಜನಗೂಡು , ಸೆ.26- ಸರ್ಕಾರದ ಸಾಲದ ಮೇಲಿನ ರಿಯಾಯಿತಿ ಮತ್ತು ಇತರೆ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ರೈತರು ಅಭಿವೃದ್ಧಿಹೊಂದಲು ಪಿಎಲ್‍ಡಿ ಬ್ಯಾಂಕಿನಿಂದ ಸುವರ್ಣವಕಾಶ ನೀಡಲಾಗುತ್ತಿದೆ ಎಂದು ಮೈಸೂರು ಜಿಲ್ಲೆಯ ಸಹಕಾರ ಸಂಘಗಳ ವ್ಯವಸ್ಥಾಪಕ ಮಂಜುನಾಥ್ ಪ್ರಸಾದ್ ತಿಳಿಸಿದರು.ಶ್ರೀ ಶೃಂಗೇರಿ ಮಠದಲ್ಲಿ ನಡೆದ ಶ್ರೀಕಂಠೇಶ್ವರ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ(ಪಿಎಲ್‍ಡಿ ಬ್ಯಾಂಕ್)2015-16ನೇವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.ನಿಗದಿತ ಅವಧಿಯೊಳಗೆ ಸಾಲ ಪಡೆದುಕೊಂಡಿರುವ ರೈತರು ಮರುಪಾವತಿ ಮಾಡಿ ಸರ್ಕಾರದ ನೂತನ ಸಾಲದ ಯೋಜನೆಯನ್ನು ಉಪಯೋಗಿಸಿಕೊಂಡು ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಬಹುದು, ಎಂದ ಅವರು ಈಗ ರೈತರು ಪಡೆದಿರುವ ಸಾಲಕ್ಕೆ ಅಸಲನ್ನು ಪಾವತಿಸಿದರೆ.

 

ಬಡ್ಡಿ ಮನ್ನಾವಾಗಲಿದ್ದು, ಈ ಹಿಂದೆ ವಾರ್ಷಿಕ ಶೇ.14 ಇದ್ದ ಬಡ್ಡಿದರವನ್ನು, ಈಗ ಸರ್ಕಾರ ಶೇ.3ಗೆ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ರೈತರು ಅಭಿವೃದ್ಧಿಹೊಂದುವಂತೆ ಕರೆ ನೀಡಿದರು.ಹಳೆ ಸಾಲ ಜಮಾ ಮಾಡಿದರೆ ಜಿಲ್ಲಾ ಬ್ಯಾಂಕ್‍ನಿದ್ದ ಕೋಟ್ಯಾಂತರ ರೂ. ಹಣವನ್ನು ಮಂಜೂರು ಮಾಡಲಿದ್ದು ಇದರಿಂದ ಈ ಬ್ಯಾಂಕ್ ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಸಹಕಾರ ನೀಡಬೇಕೆಂದು ರೈತರಲ್ಲಿ ಮನವಿ ಮಾಡಿದರು.ಬ್ಯಾಂಕ್‍ನ ಅಧ್ಯಕ್ಷ ಎಂ.ಶಾಂತಮೂರ್ತಿ ಮಾತನಾಡಿ, ಸರ್ಕಾರದ ದ್ವಂದ ನೀತಿಗಳಿಂದ ರೈತರು ಸಾಲ ಕಟ್ಟಲು ಸಬೂಬು ಹೇಳುತ್ತಿದ್ದು ಈಗ ಸರ್ಕಾರದ ನೂತನ ಸಾಲ ಸೌಲಭ್ಯದ ವ್ಯವಸ್ಥೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ವ್ಯವಸ್ಥಾಪಕಿ ಪಿ.ಮಮತ 2015-16ನೇ ಸಾಲಿನ ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು.
ನಿರ್ದೇಶಕ ನಂಜನಗೂಡು ಮಧು, ಉಪಾಧ್ಯಕ್ಷ ಮಹದೇವನಾಯಕ ನಿರ್ದೇಶಕರಾದ ಹೆಚ್.ಕೆ.ಚೆನ್ನಪ್ಪ, ಕೆ.ಚೆಲುವಪ್ಪ, ಕೆ.ಎಂ.ಚಿಕ್ಕಲಿಂಗಣ್ಣ, ಟಿ.ಎಸ್.ವೀರೇಶ್‍ಕುಮಾರ್, ಕೆ.ಬಿ.ಪರಶಿವಮೂರ್ತಿ, ನಾಗಮ್ಮ, ಜಯಮ್ಮ, ವ್ಯವಸ್ಥಾಪಕಿ ಪಿ.ಮಮತ, ಸಿಬ್ಬಂದಿಗಳಾದ ಎನ್.ಮಹೇಶ್, ರಮೇಶ್, ಶಿವಣ್ಣ , ಮಾಜಿ ಅಧ್ಯಕ್ಷರಾದ ಕುರಿಹುಂಡಿ ಮಲ್ಲಣ್ಣ, ಎನ್.ಸಿ.ಶ್ರೀಕಂಠ ಜೋಯಿಷ್, ಮುಂತಾದವರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin