ಸಾವನ್ನು ಸೆರೆಹಿಡಿಯೋದರಲ್ಲೇ ಬ್ಯುಜಿಯಾಗಿದ್ದ ಕರುಣಾಹೀನ ಜನ..!

ಈ ಸುದ್ದಿಯನ್ನು ಶೇರ್ ಮಾಡಿ

Accident-Death

ಲೂದಿಯಾನ, ಜ.18- ಕಳೆದ ವಾರ ಕಾರು ಮರಕ್ಕೆ ಡಿಕ್ಕಿ ಹೊಡೆದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದರು. ಆದರೆ, ಸುತ್ತಮುತ್ತ ಇದ್ದ ಜನ ಮಾತ್ರ ನಿರ್ದಯವಾಗಿ ವರ್ತಿಸಿ ಎಲ್ಲರೂ ತಮ್ಮ ಮೊಬೈಲ್‍ನಲ್ಲಿ ಫೋಟೋ ತೆಗೆದು ವಾಟ್ಸಾಪ್, ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡುವುದರಲ್ಲೇ ಬ್ಯುಜಿಯಾಗಿದ್ದರು.  ಇಂತಹ ಒಂದು ಘಟನೆ ನಡೆದದ್ದು ಜನವರಿ 6ರಂದು. ಲೂದಿಯಾನದಲ್ಲಿ ಸುಮಾರು 100ಕಿಲೋ ಮೀಟರ್ ವೇಗದಲ್ಲಿ ಬರುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸನ್ಯಂ (20), ಅರೋರಾ (21), ಗೌರೀಶ್ ವರ್ಮ (19), ರಿಷಿಕಾ ಬಸ್ಸಿ (19) ಸಾವನ್ನಪ್ಪಿದ್ದರು.

ಅಪಘಾತದಲ್ಲಿ ನಜ್ಜುಗುಜ್ಜಾಗಿ ಕುಟುಕು ಜೀವ ಹಿಡಿದುಕೊಂಡು ನರಳಾಡುತ್ತಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ಸುತ್ತಮುತ್ತಲಿದ್ದ ಜನ ಯಾರೂ ಮುಂದಾಗಲಿಲ್ಲ. ಆದರೆ, ಸಾಯುತ್ತಿದ್ದವರ ಫೋಟೋ ತೆಗೆಯುವುದರಲ್ಲಿ ಎಲ್ಲರೂ ಬ್ಯುಜಿಯಾಗಿದ್ದರು. ಫೋಟೋ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುತ್ತಿದ್ದರು. ತನ್ನ ಸಹೋದರಿ ರಿಷಿಕಾಳನ್ನು ಯಾರಾದರೂ ತಕ್ಷಣ ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದರೆ ಆಕೆ ಬದುಕುತ್ತಿದ್ದಳು ಎಂದು ಅಸವರಿ ಭಾರದ್ವಾಜ್ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾಳೆ. ಪ್ರಾಣಕ್ಕಿಂತ ಸಾಮಾಜಿಕ ತಾಣಗಳ ಶೇರ್ ಮತ್ತು ಲೈಕ್ಸ್ ದೊಡ್ಡದಲ್ಲ ಎಂದು ಹೇಳಿದ್ದಾಳೆ. ಇನ್ನಾದರೂ ಜನ ಅದನ್ನು ಅರ್ಥ ಮಾಡಿಕೊಂಡು ಸಂಕಷ್ಟದಲ್ಲಿರುವವರಿಗೆ ತುರ್ತಾಗಿ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

people 1

people 2

people 3

Facebook Comments

Sri Raghav

Admin